ಸಮಾಜ ಸೇವಕರಿಗೆ ಗೌರವಿಸುವುದು ಶ್ಲಾಘನೀಯ

30-DVD-1
ದೇವದುರ್ಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಎಂಎಲ್ಸಿ ಬಸವರಾಜ ಪಾಟೀಲ್ ಸೇಡಂ ಅವರಿಗೆ ಕಲ್ಯಾಣರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶ್ರೀ ಕಪಿಲ ಸಿದ್ಧರಾಮೇಶ್ವರ ಶಿವಾಚಾರ್ಯರು, ಶಾಸಕಿ ಕರೆಮ್ಮ ನಾಯಕ, ಉಪನ್ಯಾಸಕ ಡಾ.ಡಿ.ಎನ್.ಪಾಟೀಲ್ ಕಲಬುರಗಿ, ಮಾಜಿ ಸೈನಿಕ ಭೀಮನಗೌಡ ಪಾಟೀಲ್, ಸಿ.ಎಸ್.ಪಾಟೀಲ್, ಎ.ಮಲ್ಲಿಕಾರ್ಜುನ ಪಾಟೀಲ್ ಇತರರಿದ್ದರು.
Published on

ದೇವದುರ್ಗ: ಹಲವರು ಎಲೆಮರೆ ಕಾಯಿಯಂತೆ ಸಮಾಜ ಸೇವೆ ಮಾಡುತ್ತಾರೆ. ಅಂಥವರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವುದು ಶ್ಲಾಘನೀಯ. ಬಸವರಾಜ ಪಾಟೀಲ್ ಸೇಡಂ ಅವರಿಗೆ ಕಲ್ಯಾಣ ರತ್ನ ಪ್ರಶಸ್ತಿ ನೀಡುತ್ತಿರುವುದು ಉತ್ತಮ ಕೆಲಸ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.

ಪಟ್ಟಣದ ಖೇಣೇದ್ ಫಂಕ್ಷನ್‌ಹಾಲ್‌ನಲ್ಲಿ ಮತೋಶ್ರೀ ಬಸವಲಿಂಗಮ್ಮ ಮಾಪಾ ಪ್ರತಿಷ್ಠಾನದಿಂದ ಆಯೋಜಿಸಿದ್ದ ಮಾಜಿ ಎಂಎಲ್ಸಿ ಬಸವರಾಜ ಪಾಟೀಲ್ ಸೇಡಂಗೆ ಕಲ್ಯಾಣರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.

ಬಸವರಾಜ ಪಾಟೀಲ್ ಸೇಡಂ ಹಲವು ಸಮಾಜಮುಖಿ ಕೆಲಸ ಮಾಡುತ್ತ ಕಲ್ಯಾಣ ಕರ್ನಾಟಕದಲ್ಲಿ ಹೆಸರಾಗಿದ್ದಾರೆ. ಅಂಥ ಸಮಾಜ ಸೇವಕಗೆ ಪ್ರಶಸ್ತಿ ನೀಡುತ್ತಿರುವುದು ಉತ್ತಮ ಕೆಲಸವಾಗಿದ್ದು, ಪ್ರಶಸ್ತಿ ಮೌಲ್ಯ ಹೆಚ್ಚಾಗಲಿದೆ. ಪ್ರತಿಷ್ಠಾನದ ಕಾರ್ಯ ನಿರಂತರವಾಗಿ ಮುಂದುವರಿಯಲಿ ಎಂದರು.

ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಸುಭಾಶ್ಚಂದ್ರ ಮತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಸಮಾಜಮುಖಿ ಕಾರ್ಯಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವವರಿಗೆ ಕಲ್ಯಾಣ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಪ್ರತಿವರ್ಷ ಒಬ್ಬ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಬಸವರಾಜ ಪಾಟೀಲ್ ಸೇಡಂ ಸಮಾಜಮುಖಿ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಶ್ರೀ ಕಪಿಲ ಸಿದ್ಧರಾಮೇಶ್ವರ ಶಿವಾಚಾರ್ಯರು, ಉಪನ್ಯಾಸಕ ಡಾ.ಡಿ.ಎನ್.ಪಾಟೀಲ್ ಕಲಬುರಗಿ, ಮಾಜಿ ಸೈನಿಕ ಭೀಮನಗೌಡ ಪಾಟೀಲ್, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಬಸವರಾಜ್ ಯಾಟಗಲ್, ಪ್ರಮುಖರಾದ ಸಿ.ಎಸ್.ಪಾಟೀಲ್, ಎ.ಮಲ್ಲಿಕಾರ್ಜುನ ಪಾಟೀಲ್, ಸೂಗಪ್ಪ ಸಾಹುಕಾರ ಚುಕ್ಕಿ, ಶರಣಬಸವ ಪಾಟೀಲ್, ಶರಣಗೌಡ ಪಾಟೀಲ್ ಮೇದರಗೋಳ, ಡಾ.ಮುನಿಯಪ್ಪ ನಾಗೋಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net