

ಚನ್ನಮ್ಮನ ಕಿತ್ತೂರು: ಕನಕದಾಸರು ಸಮಾಜದ ಓರೆಕೋರೆಗಳನ್ನು ತಿದ್ದುವಲ್ಲಿ ಅತ್ಯಂತ ಕ್ರಿಯಾಶೀಲರಾಗಿದ್ದರು ಎಂದು ಪ್ರಾಚಾರ್ಯ ಪ್ರೊ. ಎಚ್. ಕೆ. ನಾಗರಾಜ ಹೇಳಿದರು.
ಪಟ್ಟಣದ ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪದವಿಪೂರ್ವ ಪ್ರಾಚಾರ್ಯ ಪ್ರೊ. ಎಂ.ಎಸ್. ಪಾಟೀಲ ಮಾತನಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಆರ್. ಮೆಳವಂಕಿ ಅವರು ಕನಕದಾಸರ ಕತಿಗಳನ್ನು ಸಂಶೋಧನಾತ್ಮಕವಾಗಿ ವಿಶ್ಲೇಷಿಸಿದರು. ಪ್ರೊ.ಎಂ.ಜಿ.ಹಿರೇಮಠ, ಪ್ರೊ. ಸತೀಶ ಶಹಾಪುರಮಠ, ಪ್ರೊ.ಆನಂದ ಕರಪ್ಪನವರ, ಡಾ.ಎಸ್.ಬಿ.ತೋಲಗಿ, ಪ್ರೊ.ಪ್ರಿಯಾಂಕ ಧಮೋನೆ, ಪ್ರೊ.ಪಿ. ಸಿ. ಶಿವನವ್ವನವರ ಇತರರು ಇದ್ದರು.