

ಚಿತ್ರದುರ್ಗ: ಸಮತ್ವಭಾವವು ನಮ್ಮನ್ನು ಆನಂದ ಹಾಗೂ ಆಧ್ಯಾತ್ಮಿಕ ಸಾಧನೆಗೆ ಪೂರಕವಾಗಿದೆ ಎಂದು ಇಂಡಿಯನ್ ಸೆಕ್ಷನ್ ಥಿಯಸಾಫಿಕಲ್ ಸೊಸೈಟಿ ಅಧ್ಯಕ್ಷ ಪ್ರದೀಪ್ ಗೋಹಿಲ್ ಹೇಳಿದರು.
ನಗರದ ಉಮಾಪತಿ ಕಲ್ಯಾಣ ಮಂಟಪದಲ್ಲಿ ಶನಿವಾರ ರಾಜ್ಯ ಥಿಯಸಾಫಿಕಲ್ ಫೇಡರೇಷನ್ ಸೊಸೈಟಿಯಿಂದ ಹಮ್ಮಿಕೊಂಡಿದ್ದ 114ನೇ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿ, ಐಕ್ಯತಾ ಭಾವವು ನಮ್ಮನ್ನೆಲ್ಲಾ ಸಹೋದರತ್ವದೆಡೆಗೆ ಕೊಂಡೊಯ್ಯುತ್ತದೆ ಎಂದರು.
ಚಿತ್ರದುರ್ಗ ನಗರದ ಥಿಯಸಾಫಿಕಲ್ ಸೊಸೈಟಿಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಬ್ರಹ್ಮವಿದ್ಯಾ ಜ್ಞಾನ ಸರ್ವರಿಗೂ ಅತ್ಯವಶ್ಯಕ.
ಇಂದಿನ ಜನರಿಗೆ ವೈಜ್ಞಾನಿಕ ದೃಷ್ಟಿಕೋನದ ಜತೆ ಆಧ್ಯಾತ್ಮಿಕತೆಯನ್ನು ರೂಢಿಸಿಕೊಳ್ಳುವ ಮನೋಭಾವ ಬರಬೇಕು ಎಂದು ತಿಳಿಸಿದರು.
ಸಂಜೆ ಸೇವಾ ವಿಭಾಗದ ಯು.ಎಸ್. ಪಾಂಡೆ ಮಾತನಾಡಿ, ಪ್ರತಿಯೊಬ್ಬರೂ ನೈತಿಕತೆ ಜತೆಯಲ್ಲಿ ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕಿದೆ ಎಂದರು.
ಪಾರ್ವತಿ ಮಧುಕರ್ ಭಾರತ ಸಮಾಜ ಪೂಜೆ, ಧ್ಯಾನ, ಪ್ರಾಣಾಯಾಮ, ಯೋಗ ನಡೆಸಿಕೊಟ್ಟರು.
ಜಿಲ್ಲಾಧ್ಯಕ್ಷ ಎಂ.ಗಂಗಾಧರಪ್ಪ, ಕಾರ್ಯದರ್ಶಿ ಕೆ.ಜಿ.ಚಂದ್ರಶೇಖರಶಾಸ್ತ್ರಿ, ಬಿ.ಕೆ.ನಾಗರಾಜು, ಬಿ.ವಿ.ತಿಪ್ಪೇಸ್ವಾಮಿ, ಎಂ.ಎಸ್.ಶ್ರೀಧರ,
ಸಂಘಟಕ ಗೋಪಾಲಸ್ವಾಮಿ ನಾಯಕ, ಎ.ವಿ.ಸುಬ್ರಮಣ್ಯಂ, ಆರ್.ವಿ.ವಸ್ತ್ರದ, ಡಾ.ಜ್ಯೋತಿ ನಾಗೇಶ, ಭುವನೇಶ್ವರಿ, ಉಷಾ, ಪ್ರೇಮಲೀಲಾ,
ಎಂ.ಎಸ್.ಪ್ರದೀಪ, ಡಾ.ಎಲ್.ನಾಗೇಶ, ವೆಂಕಟೇಶ, ಚನ್ನಕೇಶವ, ಪರಶುರಾಂ, ಪಾರ್ವತಿ, ತಿಪ್ಪೇಸ್ವಾಮಿ ಇದ್ದರು.