ಸೊಸೈಟಿ ಎದುರು ಠೇವಣಿದಾರರ ಪ್ರತಿಭಟನೆ

5Kittur1
Published on

ಚನ್ನಮ್ಮನ ಕಿತ್ತೂರು: ಪಟ್ಟಣದ ಶ್ರೀ ಮಹಾಲಕ್ಷಿ$್ಮ ಅರ್ಬನ್​ ಕೋ--&ಆಪ್​ ಕ್ರೆಡಿಟ್​ ಸೊಸೆಟಿಯಲ್ಲಿ ಠೇವಣಿದಾರರ ಹಣ ಮರುಪಾವತಿಸುತ್ತಿಲ್ಲ. ಸೊಸೆಟಿಯಲ್ಲಿ ಅವ್ಯವಹಾರ ನಡೆಸಿ ಹಣ ವಂಚಿಸಿದ್ದಾರೆ ಎಂದು ಆರೋಪಿಸಿ ನೂರಾರು ಠೇವಣಿದಾರರು ಸೊಸೆಟಿ ಕಚೇರಿ ಹಾಗೂ ಸೊಸೆಟಿಯ ಚೇರ್ಮನ್​ ಮನೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಸೋಮವಾರ ಪೇಟೆಯ ಹಳೇ ಬಸ್​ ನಿಲ್ದಾಣದ ಬಳಿ ಇರುವ ಶ್ರೀ ಮಹಾಲಕ್ಷಿ$್ಮ ಅರ್ಬನ್​ ಕೋ&ಆಪ್​ ಕ್ರೆಡಿಟ್​ ಸೊಸೆಟಿಯು, ಕಳೆದ 15, 20 ದಿನಗಳಿಂದ ಯಾವುದೇ ವ್ಯವಹಾರ ವಹಿವಾಟು ನಡೆಸದೆ ಕಚೇರಿಗೆ ಬೀಗ ಹಾಕಿದ್ದಾರೆ. ಇದರಿಂದ ಅನುಮಾನಗೊಂಡು ಕಚೇರಿ ಸಿಬ್ಬಂದಿಯನ್ನು ಸಂಪರ್ಕಿಸಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ನಮ್ಮ ಹಣ ಮರುಪಾವತಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಠೇವಣಿದಾರ ರವಿ ಕಲ್ಲೂರು ಮಾತನಾಡಿ, ಹಲವಾರು ವರ್ಷಗಳಿಂದ ಸೊಸೆಟಿ ಕಾರ್ಯನಿರ್ವಹಿಸುತ್ತಿದೆ ಎಂದು ನಂಬಿ 4 ಲ ರೂ. ಠೇವಣಿ ಇಟ್ಟಿದ್ದೇನೆ. ಸಾವಿರಾರು ಠೇವಣಿದಾರರು ಕಷ್ಟಪಟ್ಟು ದುಡಿದ ಕೋಟ್ಯಂತರ ರೂಪಾಯಿ ಹಣ ಜಮೆ ಮಾಡಿದ್ದಾರೆ. ಶ್ರೀ ಠೇವಣಿದಾರರ ಹಣ ಮರು ಪಾವತಿಸಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಗ್ರಾಹಕರಾದ ಮಡವಾಳಿ ವರಗನ್ನವರ, ವೀರಭದ್ರ ಬಬ್ಲಿ, ಈರಣ್ಣ ದ್ಯಾಮನವರ, ಪ್ರಕಾಶ ಬಡಿಗೇರ, ಈರಪ್ಪ ವರಗನ್ನವರ, ಮಹಮ್ಮದ್​ಅಲಿ ನದಾಫ್​, ಗಂಗಮ್ಮ ಅಣ್ಣಿಗೇರಿ, ಅನ್ನಪೂರ್ಣಾ ಮುನವಳ್ಳಿ, ನೀತಾ ಬುಲಬುಲೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net