ಸ್ತ್ರೀ ಸಬಲೀಕರಣದಿಂದ ಮಾತ್ರ ಸಮಾಜ ಸದೃಢ

14 ckm 4
ಚಿಕ್ಕಮಗಳೂರಿನಲ್ಲಿ ಏರ್ಪಡಿಸಿದ್ದ ಕನಶ್ರೀ ಮಹಿಳಾ ಸಮಾಜದ 11ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿದ್ದ ಮಹಿಳೆಯರು. ಚಂದ್ರಕಲಾ ರುದ್ರೇಶ್, ಸರೋಜಾ ಚಂದ್ರೇಗೌಡ, ಶಾರದಾ ಮಾಸ್ತೇಗೌಡ, ಅನ್ನಪೂರ್ಣ ಗೋಪಾಲಕೃಷ್ಣ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಮಹಿಳೆಯರ ಸಬಲೀಕರಣದಿಂದ ಮಾತ್ರ ಸಮಾಜ ಸದೃಢವಾಗಲು ಸಾಧ್ಯ ಎಂದು ಕನಕಶ್ರೀ ಮಹಿಳಾ ಸಮಾಜದ ಅಧ್ಯಕ್ಷೆ ಚಂದ್ರಕಲಾ ರುದ್ರೇಶ್ ಅಭಿಪ್ರಾಯಪಟ್ಟರು.

ನಗರದ ಕನಕ ಸಮುದಾಯ ಭವನದಲ್ಲಿ ಕನಶ್ರೀ ಮಹಿಳಾ ಸಮಾಜದ 11ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯು ಸಂಸಾರದ ಜವಾಬ್ದಾರಿ ನೋಡಿಕೊಳ್ಳುವುದರ ಜತೆಗೆ ಸಾಧನೆ ಮಾಡಬೇಕೆಂದರೆ ಮನೆಯಿಂದ ಹೊರಬಂದು ಸಂಘಟಿತರಾಗಿ, ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯರಿಗೆ ಬೆಂಬಲ ನೀಡಬೇಕು. ಕುಟುಂಬದಲ್ಲಿ ಹೆಣ್ಣು ಗಂಡೆಂದು ತಾರತಮ್ಯ ಮಾಡದೇ ಸರಿಸಮಾನವಾಗಿ ನೋಡಬೇಕು ಎಂದು ತಿಳಿಸಿದರು.
ಮಹಿಳೆ ಇಂದು ಎಲ್ಲ ಕ್ಷೇತ್ರದಲ್ಲಿ ಪುರುಷರಿಗೆ ಸರಿ ಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ದಿನ ಪ್ರತಿಯೊಬ್ಬ ಮಹಿಳೆಯನ್ನು ಗೌರವಿಸಬೇಕು. ಪ್ರತಿ ಪುರುಷರ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಎಂಬುದು ಸತ್ಯ. ಮಹಿಳೆಯನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಕನಕಶ್ರೀ ಮಹಿಳಾ ಸಮಾಜದ ಉಪಾಧ್ಯಕ್ಷೆ ಸರೋಜಾ ಚಂದ್ರೇಗೌಡ, ಕಾರ್ಯದರ್ಶಿ ಶಾರದಾ ಮಾಸ್ತೇಗೌಡ, ಖಜಾಂಚಿ ಅನ್ನಪೂರ್ಣ ಗೋಪಾಲಕೃಷ್ಣ, ನಿರ್ದೇಶಕಿಯರಾದ ವನಜಾಕ್ಷಿ, ಸರೋಜಾ, ಗೀತಾ, ಜಯಮ್ಮ, ಗಾಯತ್ರಿ, ಗೀತಾ, ಮಂಜುಳಾ, ಕಮಲಾಕ್ಷಮ್ಮ, ರೇಣುಕಾ, ಹರಿಣಿ, ಅನ್ನದಾತ ರೈತ ಸಂಘದ ರಾಜ್ಯಾಧ್ಯಕ್ಷೆ ಸರೋಜಾ ಬಸವರಾಜು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net