

ಅಥಣಿ: ಸಮಾಜ ಸೇವೆಯಲ್ಲಿನ ಸಂತೃಪ್ತಿ ಬೇರೆಯಾವುದರಲ್ಲಿಲ್ಲ. ಈ ನಿಟ್ಟಿನಲ್ಲಿ ಇನ್ನರ್‌ವ್ಹೀಲ್ ಸಂಸ್ಥೆ ಹಲವಾರು ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ರೂಪಿಸಿದೆ ಎಂದು ಇನ್ನರ್‌ವ್ಹಿಲ್ ಕಬ್ಲ್ ಸಂಸ್ಥಾಪಕ ಅಧ್ಯಕ್ಷೆ ಪೂರ್ಣಿಮಾ ಪಾಂಗಿ ಹೇಳಿದರು.
ತಾಲೂಕಿನ ಚಮಕೇರಿ ರಸ್ತೆಯಲ್ಲಿರುವ ಸುಕನ್ಯಾ ವೃದ್ಧಾಶ್ರಮದಲ್ಲಿ ಭಾನುವಾರ ಇನ್ನರ್‌ವ್ಹಿಲ್ ಸಂಸ್ಥೆಯ ರಜತ ಮಹೋತ್ಸವ ಅಂಗವಾಗಿ ಎರಡು ವ್ಹೀಲ್‌ಚೇರ್ ವಿತರಿಸಿ ಅವರು ಮಾತನಾಡಿದರು.
ಇನ್ನರ್‌ವ್ಹಿಲ್ ಕ್ಲಬ್ ಅಧ್ಯಕ್ಷೆ ತೃಪ್ತಿ ಕುಲಕರ್ಣಿ, ಸಂಸ್ಥೆಯ ಮಧುಶ್ರೀ ಮಂಗಸೂಳಿ, ಶೋಭಾ ಕೋಲಾರ, ಸುನೀತಾ ದೇಸಾಯಿ, ಮಹಾದೇವಿ ಪಾಟೀಲ, ಸುಜಾತಾ ಜಗದಾಳಮಠ, ಭಾರತಿ ಕೋರೆ, ಲಲಿತಾ ಮೆಕನಮರಡಿ, ಪ್ರಿಯಾ ಚಿಮ್ಮಡ, ರೇಣುಕಾ ಸೌದಾಗರ, ಮನಿಷಾ ಸಂಕ್ರಟ್ಟಿ, ಜಯಶ್ರೀ ಪೂಜಾರಿ, ಶಿಲ್ಪಾ ದಾದಪ್ಪಗೊಳ, ಭಾಗ್ಯವಂತಿ ಬಿರಾದಾರ, ಈರಣ್ಣ ಅಡಗಲ್ಲ, ಮಹಾದೇವ ಬಿರಾದಾರ ಇತರರಿದ್ದರು.