ಸಮಾಜದಲ್ಲಿ ಆದರ್ಶ ದಂಪತಿಗಳಾಗಿ - ಶ್ರೀ ಮಲ್ಲಿಕಾರ್ಜುನ ಶಾಸ್ತ್ರಿ ಹಿರೇಮಠ ಸಲಹೆ

Putagamari Mass Marriage
ಯಲಬುರ್ಗಾ ತಾಲೂಕಿನ ಪುಟಗಮರಿ ಬಸವೇಶ್ವರ ಜಾತ್ರೋತ್ಸವ ನಿಮಿತ್ತ ನಡೆದ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳು.
Published on

ಯಲಬುರ್ಗಾ: ನವಜೋಡಿಗಳು ಸಮಾಜದಲ್ಲಿ ಆದರ್ಶ ಬದುಕನ್ನು ನಡೆಸುವ ಮೂಲಕ ಮಾದರಿಯಾಗಬೇಕು ಎಂದು ಚಿಕ್ಕಬೊಮ್ಮನಾಳದ ಶ್ರೀ ಮಲ್ಲಿಕಾರ್ಜುನ ಶಾಸ್ತ್ರಿ ಹಿರೇಮಠ ಹೇಳಿದರು.

ತಾಲೂಕಿನ ಪುಟಗಮರಿ ಗ್ರಾಮದ ಶ್ರೀ ಬಸವೇಶ್ವರ ದೇವರ 44ನೇ ವರ್ಷದ ಪುರಾಣ ಮಹಾ ಮಂಗಲೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ಜೀವನದಲ್ಲಿ ಎದುರಾಗುವ ಸಿಹಿ ಕಹಿಯನ್ನು ಸಮನಾಗಿ ಸ್ವೀಕರಿಸಿ ಬದುಕು ಕಟ್ಟಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಸಾಮೂಹಿಕ ಮದುವೆಗಳು ಸರಳವಾಗಿ ನಡೆಯುತ್ತಿದ್ದು, ಬಡ ವರ್ಗದವರಿಗೆ ಆರ್ಥಿಕ ಹೊರೆ ಕಡಿಮೆ ಮಾಡಲು ಸಹಕಾರಿಯಾಗಿವೆ.

ಯಾವುದೇ ರೀತಿಯ ಆಡಂಬರವಿಲ್ಲದೆ ಸರಳವಾಗಿ ವಿವಾಹಯಾಗುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಜತೆಗೆ ಸಂಸ್ಕಾರ ಕಲಿಸಬೇಕು. ಶಿವಶರಣರು ಸಮಾಜಕ್ಕೆ ನೀಡಿರುವ ಮೌಲ್ಯಗಳನ್ನು ಅರ್ಥೈಸಿಕೊಂಡು ಬದುಕು ಸಾಗಿಸಿದಾಗ ಮಾತ್ರ ಜೀವನ ಸಾರ್ಥಕತೆಗೊಳ್ಳುತ್ತದೆ ಎಂದರು.

ಗ್ರಾಪಂ ಅಧ್ಯಕ್ಷೆ ಶಶಿಕಲಾ ಅಯ್ಯಪ್ಪ ಕಲ್ಲೊಡ್ಡಿ, ಗಣ್ಯರಾದ ವಿರೂಪಾಕ್ಷಯ್ಯ ಶಾಸ್ತ್ರಿ, ರುದ್ರಯ್ಯ ಸಾಮೀಜಿ, ಕರಿಬಸಯ್ಯ ನಂದಾಪುರ, ಹೊಳಿಯಮ್ಮ ಶರಣಗೌಡ ಪಾಟೀಲ್, ನಾಗರಾಜ ಪಟ್ಟಣಶೆಟ್ಟಿ, ಬಸವರಾಜ ತಳವಾರ್, ಸಂಗಪ್ಪ ಅಂಗಡಿ, ಅಶೋಕ ಕುಂಬಳಕಾಯಿ, ಶಂಕ್ರಪ್ಪ ತಳವಾರ್, ಅಮರಯ್ಯ ನಂದಾಪೂರ, ಕಲ್ಯಾಣಪ್ಪ ಕಲ್ದೊಡ್ಡಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net