

ಮಂಡ್ಯ: ತಾಲೂಕಿನ ದುದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶಂಕರಲಿಂಗೇಗೌಡ ಬೊಮ್ಮನಹಳ್ಳಿ ಅವಿರೋಧ ಆಯ್ಕೆಯಾದರು. ಕಾಂಗ್ರೆಸ್ ಮುಖಂಡ ರವಿ ಭೋಜೇಗೌಡ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತ ಮಂಡಳಿ ಪಕ್ಷದ ತೆಕ್ಕೆ ಸೇರಿಕೊಂಡಿತು.
12 ಸದಸ್ಯ ಬಲದ ಸೊಸೈಟಿಯಲ್ಲಿ ಅಧ್ಯಕ್ಷರಾಗಿದ್ದ ಎಂ.ಬಿ.ಶಿವರಾಂ ರಾಜೀನಾಮೆ ತೆರವಾಗಿದ್ದ ಸ್ಥಾನಕ್ಕೆ ಸಂಘದ ಕಚೇರಿಯಲ್ಲಿ ಚುನಾವಣಾ ಪ್ರಕಿಯೆ ನಡೆಯಿತು. ಅಂತೆಯೇ ರವಿ ಭೋಜೇಗೌಡ ಅವರ ಸೂಚನೆಯಂತೆ ಶಂಕರಲಿಂಗೇಗೌಡ ಅವರನ್ನು ಹೊರತುಪಡಿಸಿ ಮತ್ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಎನ್.ಎಲ್.ರವಿ ಘೋಷಣೆ ಮಾಡಿದರು.
ನೂತನ ಅಧ್ಯಕ್ಷರು ಮಾತನಾಡಿ, ರವಿ ಭೋಜೇಗೌಡ ಅವರ ಮಾರ್ಗದರ್ಶನದಲ್ಲಿ ಕೃಷಿ ಪತ್ತಿನ ಸಹಕಾರ ಸಂಘವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಎಲ್ಲರೂ ಸಹಕರಿಸೋಣ. ನಿರ್ದೇಶಕರ ಸಹಕಾರ ಮತ್ತು ಗ್ರಾಮಸ್ಥರ ನೆರವಿನೊಂದಿಗೆ ಎಲ್ಲರಿಗೂ ಅನುಕೂಲವಾಗುವಂತಹ ಕೆಲಸ ಮಾಡುತ್ತೇನೆ ಎಂದರು.
ಸಂಘದ ಉಪಾಧ್ಯಕ್ಷ ರಾಮಶೆಟ್ಟಿ, ನಿರ್ದೇಶಕರಾದ ಡಿ.ಎನ್.ನರಸಿಂಹೇಗೌಡ, ಬೀಚನಹಳ್ಳಿ ಶಿವಕುಮಾರ್, ಎಚ್.ಜೆ.ಹರೀಶ್, ಎಂ.ಜೆ.ನಾಗರಾಜು, ಬೋರಯ್ಯ, ಪುಟ್ಟಸ್ವಾಮಿ, ಸರೋಜಮ್ಮ, ಸಾಕಮ್ಮ, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಮಾನಸ, ಸಂಘದ ಪ್ರಭಾರ ಸಿಇಒ ಎಂ.ಸಿ.ದೀಪಕ್ ಇತರರಿದ್ದರು.