ಅಘಲಯ ಸೊಸೈಟಿಗೆ ಮಂಜಮ್ಮ ಜಯರಾಂ ಅವಿರೋಧ ಆಯ್ಕೆ

Socity
Published on

ಅಘಲಯ (ಕೆ.ಆರ್.ಪೇಟೆ.ತಾ): ಅಘಲಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಮಂಜಮ್ಮ ಜಯರಾಂ ಅವಿರೋಧ ಆಯ್ಕೆಯಾಗಿದ್ದಾರೆ.

ಎನ್.ಡಿ.ಕೃಷ್ಣಸಿಂಗ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಮಂಜಮ್ಮ ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯೂ ಆದ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಆನಂದ್ ನಾಯಕ್ ಅವಿರೋಧ ಆಯ್ಕೆ ಘೋಷಿಸಿದರು.

ಸಹ ಚುನಾವಣಾಧಿಕಾರಿಯಾಗಿ ಸಂಘದ ಸಿಇಒ ಮುರುಳೀಧರ್ ಕಾರ್ಯನಿರ್ವಹಿಸಿದರು. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್.ಜಾನಕೀರಾಂ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಎಸ್.ರಮೇಶ್, ಗ್ರಾಪಂ ಮಾಜಿ ಅಧ್ಯಕ್ಷೆ ಆಶಾ ನಾಗೇಂದ್ರ, ಹೇಮಾವತಿ ಲೋಕೇಶ್, ಸಂಘದ ಉಪಾಧ್ಯಕ್ಷ ನಾಗರಘಟ್ಟ ಮಂಜು, ನಿರ್ದೇಶಕರಾದ ಎನ್.ಎಸ್.ಆಶಾ, ಅನಂತು, ಕೃಷ್ಣಸಿಂಗ್, ದೇವಮ್ಮ ಮರಿನಾಯಕ್, ರಾಜೇಗೌಡ, ಸಂಘದ ಮೇಲ್ವಿಚಾರಕ ಕೆ.ಆರ್.ರಘು, ಡಿ.ಎಸ್.ನಾಗೇಂದ್ರ, ಎ.ಎಲ್.ನಂಜಪ್ಪ, ಎ.ಜೆ.ಗಣೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಯೋಗೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net