ಕ್ರಾಂತಿಯೋಗಿ ಸಂಘಕ್ಕೆ ಅಧ್ಯಕ್ಷರಾಗಿ ರಮೇಶ್, ಉಪಾಧ್ಯಕ್ಷರಾಗಿ ಮಹದೇವಸ್ವಾಮಿ ಆಯ್ಕೆ

Prakash
Published on

ಮಂಡ್ಯ: ಕ್ರಾಂತಿಯೋಗಿ ಬಸವೇಶ್ವರ ನೌಕರರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷರಾಗಿ ರಮೇಶ್ ಹಾಗೂ ಉಪಾಧ್ಯಕ್ಷರಾಗಿ ಆರ್.ಜಿ.ಮಹದೇವಸ್ವಾಮಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಗರದ ಸಂಘದ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆರ್.ಜಿ. ಮಹದೇವಸ್ವಾಮಿ ಹೊರತುಪಡಿಸಿ ಮತ್ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಎನ್.ರವಿಕುಮಾರ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಚುನಾವಣೆ ಬಳಿಕ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಎಸ್.ಇ.ಚನ್ನರಾಜು ಅವರನ್ನು ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ನಿರ್ದೇಶಕರಾದ ಎಚ್.ಡಿ.ಪರಶಿವಪ್ಪ, ಜಿ.ಎಂ.ಶಿವಲಿಂಗಯ್ಯ, ಬಿ.ಎಸ್.ನಂಜಪ್ಪ, ಎ.ಪಿ.ಮೃತ್ಯುಂಜಯ, ಜೆ.ಸಿ. ಮಹದೇವಸ್ವಾಮಿ, ಡಿ.ಆರ್.ಉಮಾದೇವಿ, ಸಿ.ಭಾಗ್ಯಮ್ಮ, ಡಿ.ಜಿ.ಗಿರೀಶ್, ಎಂ.ಸಿ.ಲೋಕೇಶ್, ಡಿ.ಪ್ರಕಾಶ್, ಎಚ್.ಬಿ.ಲಿಂಗರಾಜು, ಬಿ.ವಿ.ಮಂಜುನಾಥ್, ವಕೀಲ ಮಲ್ಲಿಕಾರ್ಜುನಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net