

ಮಂಡ್ಯ: ತಾಲೂಕಿನ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಲ್ಲಹಳ್ಳಿಯ ಕೆ.ಎಸ್.ಧರ್ಮೇಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಾರ್ಯಾಲಯದಲ್ಲಿ ನಡೆದ ಚುನಾವಣೆಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕೆ.ಎಸ್.ಧರ್ಮೇಂದ್ರ ಹೊರತುಪಡಿಸಿ ಮತ್ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಎಚ್.ಎಸ್.ಮುಕ್ತ ಅವಿರೋಧದ ಆಯ್ಕೆಯನ್ನು ಘೋಷಣೆ ಮಾಡಿದರು.
ಆರ್‌ಎಪಿಎಂಎಸ್ ನಿರ್ದೇಶಕ ಕೆ.ಸಿ.ರವೀಂದ್ರ, ಸೊಸೈಟಿ ಉಪಾಧ್ಯಕ್ಷೆ ಎಂ.ಮಂಗಳಗೌರಿ, ನಿರ್ದೇಶಕರಾದ ಜೆ.ಬೋರಯ್ಯ, ಟಿ.ರಾಜು, ಡಿ.ಮೋಹನ್, ಎನ್.ನಾಗರಾಜು, ಶೋಭಾ ಸುರೇಶ್, ಪುಟ್ಟಸ್ವಾಮಿ, ಬೋರೇಗೌಡ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಬಿ.ಜಯಪಾಲ, ಮುಖಂಡರಾದ ಬೆಟ್ಟೇಗೌಡ, ಸುರೇಶ್, ಶಿವಲಿಂಗೇಗೌಡ, ಕೆ.ಎಸ್.ಆನಂದ್ ಇತರರಿದ್ದರು.