ಗೆಜ್ಜಲಗೆರೆ ಸೊಸೈಟಿ ಅಧ್ಯಕ್ಷರಾಗಿ ಸಿದ್ದಪ್ಪ ಭಗವಂತೇಗೌಡ, ಉಪಾಧ್ಯಕ್ಷರಾಗಿ ಜಿ.ಪಿ.ಸತೀಶ್ ಅವಿರೋಧ ಆಯ್ಕೆ

07M.D.R.1
Published on

ಮದ್ದೂರು: ತಾಲೂಕಿನ ಗೆಜ್ಜಲಗೆರೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಿದ್ದಪ್ಪ ಭಗವಂತೇಗೌಡ, ಉಪಾಧ್ಯಕ್ಷರಾಗಿ ಜಿ.ಪಿ.ಸತೀಶ್ ಅವಿರೋಧ ಆಯ್ಕೆಯಾದರು.
ಅಧ್ಯಕ್ಷ ಜಿ.ಬಿ.ಕೃಷ್ಣ ಹಾಗೂ ಉಪಾಧ್ಯಕ್ಷ ಕಾಶಿಹೆಗ್ಗಡೆ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸಿದ್ದಪ್ಪ ಭಗವಂತೇಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಪಿ.ಸತೀಶ್ ಹೊರತುಪಡಿಸಿ ಬೇರ‌್ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಸಹಕಾರ ಸಂಘಗಳ ಉಪನಿಬಂಧಕಿ ಪಾರ್ವತಮ್ಮ ಘೋಷಿಸಿದರು.
ನಿರ್ದೇಶಕರಾದ ಕಾಶಿಹಗ್ಗೆಡೆ, ಕೆ.ಬಿ.ಕೃಷ್ಣಪ್ಪ, ಜಿ.ಬಿ.ಕೃಷ್ಣ, ಜಿ.ಎಸ್.ಮಹದೇವ, ಪ್ರಭಾವತಿ, ಶುಶೀಲಮ್ಮ, ಶಿವಬೋರಯ್ಯ, ಸಿದ್ದಪ್ಪಗೌಡ, ಮುಖಂಡರಾದ ಮೋಹನ್, ಜಿ.ಸಿ.ಮಹೇಂದ್ರ, ಶಿವಣ್ಣ, ಜಿ.ಎಸ್.ನಾಗೇಶ್, ಪರಮೇಶ್, ರಮೇಶ್, ಕೆ.ಟಿ.ನಾಗೇಶ್, ಪ್ರಭು, ಎ.ಸಿ.ಶಿವರಾಮ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net