

ಅಳವಂಡಿ: ಬದುಕಿನ ಕಷ್ಟಗಳನ್ನು ಎದುರಿಸುವ ಆತ್ಮವಿಶ್ವಾಸ ಮಹಿಳೆಯರು ಬೆಳೆಸಿಕೊಳ್ಳಲಿ ಎಂದು ಕೆಎಚ್‌ಪಿಟಿ ಕ್ಷೇತ್ರ ಸಂಯೋಜಕಿ ಶಿವಲೀಲಾ ಹಿರೇಮಠ ಹೇಳಿದರು.
ಸಮೀಪದ ಹಿರೇಸಿಂದೋಗಿ ಗ್ರಾಮದಲ್ಲಿ ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನದಿಂದ ಭಾನುವಾರ ಹಮ್ಮಿಕೊಂಡಿದ್ದ ನಾಯಕತ್ವ ಮತ್ತು ಸಂವಹನ ಶಿಬಿರದಲ್ಲಿ ಮಾತನಾಡಿದರು.
ಮಹಿಳೆಯರು ಜೀವನದಲ್ಲಿ ಎದುರಿಸುತ್ತಿರುವ ಎಲ್ಲ ತಾರತಮ್ಯ ತೊಡೆದು ಹಾಕಬೇಕಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಸಮಾಜ ಅವರ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಶಿಬಿರದಲ್ಲಿ ನೀಡುವ ನಾಯಕತ್ವ ಹಾಗೂ ಸಂವಹನದ ತರಬೇತಿ ಪಡೆದು ನಾಯಕತ್ವ, ಸಂವಹನ ಕೌಶಲ್ಯ ವೃದ್ಧಿಸಿಕೊಂಡು ಧೈರ್ಯವಾಗಿ ಜೀವನ ಸಾಗಿಸಬೇಕು ಎಂದರು.
ಕ್ಷೇತ್ರ ಸಂಯೋಜಕಿ ಸುಷ್ಮಾ ಸಂಗರಡ್ಡಿ ಮಾತನಾಡಿ, ಧೈರ್ಯ, ನಾಯಕತ್ವ ಗುಣ, ಜ್ಞಾನ, ಕೌಶಲ್ಯ ಹೆಚ್ಚಳ ಮಾಡುವುದು ಮಹಿಳಾ ಸಬಲೀಕರಣದ ಮುಖ್ಯ ಉದ್ದೇಶವಾಗಿದೆ ಎಂದರು. ಮಹಿಳೆಯರಿಗೆ ವಿವಿಧ ಸ್ಪರ್ಧೆಗಳ ಮೂಲಕ ತರಬೇತಿ ನೀಡಲಾಯಿತು.
ಪ್ರಮುಖರಾದ ಮಲ್ಲಪ್ಪ ಗುಡದಣ್ಣವರ, ರಮೇಶ ತೋಟದ, ಶರಣಪ್ಪ ಕಟ್ಟೆಪ್ಪನವರ, ಸುಭಾಷ ಮೈನಳ್ಳಿ, ಮರುಳಸಿದ್ದಯ್ಯ ಮಠದ, ಸಮುದಾಯ ಸಂಘಟಕರಾದ ಅರುಣ, ಸುನಂದಾ, ಶಿವಮ್ಮ, ಪ್ರಿಯಾಂಕಾ, ಕಲ್ಪನಾ, ಬಾಳಮ್ಮ, ನೀಲಮ್ಮ, ಶಿವಲೀಲಾ, ಬಿಎಪ್‌ಸಿಗಳಾದ ಕಾವ್ಯ, ಭಾಗ್ಯ, ಅಕ್ಕಮ್ಮ, ಲಕ್ಷ್ಮೀ, ಅಕ್ಷತಾ, ಶಿವಗಂಗಾ, ಬಿಎಂಗಳಾದ ಯಲ್ಲಪ್ಪ ಮೆಣೆಗಾರ, ಬಸವರಾಜ, ಆರ್‌ಜಿಗಳಾದ ಅನುಷಾ, ದುರ್ಗಮ್ಮ, ಅನಿತಾ ಇದ್ದರು.