ಸಮಾಜ ತಿದ್ದುವ ಶಕ್ತಿ ರಂಗಕಲೆಗಿದೆ

Published on

ಕುಕನೂರು: ಪಟ್ಟಣದ ಶ್ರೀ ಗುದ್ನೇಶ್ವರ ಜಾತ್ರಾ ಮಹೋತ್ಸವ ಡಿ.15ರಿಂದ ಆರಂಭಗೊಳ್ಳಲಿದೆ. ಈ ನಿಮಿತ್ತ ಮಕ್ಕಳ ಮಾರಾಟ, ಕಳ್ಳತನ ಹಾಗೂ ಸಮಾಜದಲ್ಲಿನ ದುಷ್ಕೃತ್ಯಗಳ ಜಾಗೃತಿಗಾಗಿ ಅಕ್ಕ ಅಂಗಾರ, ತಂಗಿ ಬಂಗಾರ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರಾಜಣ್ಣ ಜೇವರ್ಗಿ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಬೈಲ್ ಹಾವಳಿಗೆ ಜನ ಮಾರುಹೋಗಿದ್ದರಿಂದ ನಾಟಕ ಕಣ್ಮರೆಯಾಗುತಿವೆ. ಸಮಾಜ ತಿದ್ದುವ ಶಕ್ತಿ ರಂಗ ಕಲೆಗೆ ಇದ್ದು, ಇದನ್ನು ಉಳಿಸಬೇಕಾಗಿದೆ.

ಈ ನಿಟ್ಟಿನಲ್ಲಿ ರಂಗಭೂಮಿ ಕಲಾವಿದರು ಹಣಕ್ಕೆ ಆಸೆ ಪಡದೆ ಕಲಾ ಸೇವೆ ಮಾಡುತ್ತಾ ಬದುಕುತ್ತಿದ್ದಾರೆ. ಜನಜಾಗೃತಿಗಾಗಿ ಹಮ್ಮಿಕೊಂಡಿರುವ ಮಹಿಳಾ ಪ್ರಧಾನವಾದ ನಾಟಕದಲ್ಲಿ,ಸಮಾಜದ ಸ್ಥೀರತೆ ಕಾಪಾಡುವ ಸಂದೇಶ ಇದೆ ಎಂದರು. ಪ್ರಮುಖರಾದ ವಿನಾಯಕ ಬಿನ್ನಾಳ, ಅಂದಪ್ಪ ಬನ್ನಿಕೊಪ್ಪ, ಕಳಕನಗೌಡ ತೊಂಡಿಹಾಳ, ನಾಗರಾಜ ಗುಗ್ಗಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net