ಸಮಾಜಕ್ಕೆ ಪೌರಕಾರ್ಮಿಕರ ಕೊಡುಗೆ ಅನನ್ಯ

06 KARATAGI 01
ಕಾರಟಗಿಯಲ್ಲಿ ಪುರಸಭೆಯಿಂದ ಏರ್ಪಡಿಸಿದ್ದ ಪೌರಕಾರ್ಮಿಕ ದಿನ ಕಾರ್ಯಕ್ರಮಕ್ಕೆ ಸಚಿವ ಶಿವರಾಜ ತಂಗಡಗಿ ಚಾಲನೆ ನೀಡಿದರು. ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟಿ, ಅಧ್ಯಕ್ಷೆ ರೇಖಾ ಆನೆ ಹೊಸೂರು, ಉಪಾಧ್ಯಕ್ಷೆ ದೇವಮ್ಮ, ಸದಸ್ಯರಾದ ಎಚ್.ಈಶಪ್ಪ, ರಾಜಶೇಖರ ಸಿರಿಗೇರಿ, ಹಿರೇಬಸಪ್ಪ ಸಜ್ಜನ್, ಮಂಜುನಾಥ ಮೇಗೂರು, ಕೆ.ಎಚ್.ಸಂಗನಗೌಡ, ಎಂ.ಆನಂದ, ದೊಡ್ಡಬಸವ ಬೂದಿ, ಸೋಮಶೇಖರ ಭೇರ್ಗಿ, ಮೋನಿಕಾ, ಪದ್ಮಾವತಿ, ರಾಮಣ್ಣ, ಹುಸೇನ್ .ಬಿ, ಸುಜಾತಾ, ಲಕ್ಷ್ಮೀ ಎತ್ತಿನಮನಿ, ನಾಮನಿರ್ದೇಶಿತ ಸದಸ್ಯರಾದ ವೀರೇಶ ಗದ್ದಿ, ಸಿದ್ದಪ್ಪ ಬೇವಿನಾಳ, ಸೋಮಶೇಖರಪ್ಪ ನಾಯಕ, ಹನುಮಂತರೆಡ್ಡಿ ಇತರರಿದ್ದರು.
Published on

ಕಾರಟಗಿ: ಪುರಸಭೆಯ 17ಜನ ಪೌರಕಾರ್ಮಿಕರ ಸೇವೆ ಕಾಯಂಗಾಗಿ ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದರು.

ಪಟ್ಟಣದ ಪದ್ಮಶ್ರೀ ಕನ್ವೆನ್ಷನ್ ಹಾಲ್ನಲ್ಲಿ ಪುರಸಭೆಯಿಂದ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ದುಡಿಯುವ ವರ್ಗದ ಪರವಾಗಿ ಕೆಲಸ ಮಾಡುತ್ತಿದೆ.

ಪೌರ ಕಾರ್ಮಿಕರ ಸೇವೆ ಅಪರಿಮಿತವಾದದ್ದು, ಜನತೆ ಬೆಳಗ್ಗೆ ಎದ್ದೇಳುವ ಮುನ್ನವೇ ಪಟ್ಟಣ ಶುಚಿಗೊಳಿಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಿತ್ಯ ಶ್ರಮಿಸುತ್ತಾರೆ. ಅವರ ಕೆಲಸವನ್ನು ಸಮಾಜದ ಪ್ರತಿಯೊಬ್ಬರೂ ಗೌರವಿಸುವ ಜತೆಗೆ ಪೌರ ಕಾರ್ಮಿಕರನ್ನು ಪ್ರೀತಿಯಿಂದ ಕಾಣಬೇಕು. ಪುರಸಭೆ 17ಜನರನ್ನು ಶೀಘ್ರ ಕಾಯಂ ಮಾಡಿಕೊಳ್ಳಲು ಸಚಿವ ಸಂಪುಟದಲ್ಲಿ ಪ್ರಸ್ತಾಪಿಸಲಾಗುವುದು.

ದೇವಿಕ್ಯಾಂಪ್‌ನ ಎರಡು ಎಕರೆ ಪ್ರದೇಶದಲ್ಲಿ ಪೌರ ಕಾರ್ಮಿಕರಿಗಾಗಿಯೇ ಪ್ರತ್ಯೇಕ ವಸತಿನಿಲಯಗಳ ಸಮುಚ್ಚಯ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತ್ವರಿತಗತಿಯಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದರು. ಮರುಳಸಿದ್ದಯ್ಯಸ್ವಾಮಿ ಹಿರೇಮಠ, ತಹಸೀಲ್ದಾರ್ ಎಂ.ಕುಮಾರಸ್ವಾಮಿ, ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಎನ್. ಶ್ರೀನಿವಾಸ,

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸರ್ದಾರ ಅಲಿ, ಕರ್ನಾಟಕ ಪೌರ ಸೇವಾ ನೌಕರರ ಸಂಘದ ಕಾರಟಗಿ ಶಾಖೆ ಅಧ್ಯಕ್ಷ ಸಣ್ಣವೀರಪ್ಪ ಚೌಡಕಿ, ಪುರಸಭೆ ವ್ಯವಸ್ಥಾಪಕ ಎಚ್.ಪರಮೇಶ್ವರಪ್ಪ, ಉಪನ್ಯಾಸಕಿ ಡಾ.ಶಿಲ್ಪಾ ದಿವಟರ್, ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಶಿವರೆಡ್ಡಿ ನಾಯಕ್, ಪ್ರಮುಖರಾದ ಕೆ.ಸಿದ್ದನಗೌಡ, ಚನ್ನಬಸಪ್ಪ ಸುಂಕದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net