ದೇವಸ್ಥಾನದಲ್ಲಿ ತಪ್ಪೊಪ್ಪಿಕೊಂಡು ಪ್ರಾರ್ಥನೆ

Published on

ಪುತ್ತೂರು: ಮಾದರಿ ಸಹಕಾರಿ ಸಂಘದಲ್ಲಿ ನಿಯಮಗಳನ್ನು ಗಾಳಿಗೆ ತೂರಿದ ಸಾಲ ನೀಡಿದ ವಿಚಾರದಲ್ಲಿ ತನಿಖೆ ಪ್ರಾರಂಭವಾಗುವ ಸೂಚನೆ ಸಿಗುತ್ತಿದ್ದಂತೆ ಸಿಬ್ಬಂದಿ ವರ್ಗ ಸುರ್ಯ ದೇವಸ್ಥಾನಕ್ಕೆ ತೆರಳಿ ತಪ್ಪೊಪ್ಪಿಕೊಂಡು ಪ್ರಾರ್ಥನೆ ನಡೆಸಿ ತಪ್ಪು ಕಾಣಿಕೆಯನ್ನು ಹಾಕಿದ ವಿಚಾರ ಬೆಳಕಿಗೆ ಬಂದಿದೆ.

ಮೂರು ಕಡೆಯಲ್ಲಿ ತನಿಖೆ ನಡೆಸಿದ ಜಿಲ್ಲಾ ಕೇಂದ್ರ ಸಹಕಾರಿ ಅಧಿಕಾರಿಗಳ ತಂಡ ಶನಿವಾರ ಆಗಮಿಸಿಲ್ಲ. ತನಿಖೆ ತೀವ್ರವಾಗುತ್ತಿದ್ದಂತೆ ಸಹಕಾರಿ ಪ್ರಮುಖರ ನೇತೃತ್ವದಲ್ಲಿ ನಿಗದಿಗಿಂತ ಕಡಿಮೆ ಇದ್ದ ಬಂಗಾರವನ್ನು ಸರಿಪಡಿಸುವ ಕೆಲಸ ನಡೆದಿರುವ ಮಾತು ಕೇಳಿಬರುತ್ತಿದೆ. ಒಂದಷ್ಟು ಕೋಟಿ ಹಣವನ್ನು ನಗದು ರೂಪದಲ್ಲಿ ಕಟ್ಟಿಸಿಕೊಳ್ಳುವ ಕೆಲಸವೂ ನಡೆದಿದೆ.

ಪ್ರಕರಣ ಗಂಭೀರ ಸ್ವರೂಪಕ್ಕೆ ತಿರುಗುತ್ತಿರುವುದನ್ನು ಗಮನಿಸಿದ ಆಡಳಿತ ಮಂಡಳಿಯವರು ಉಗ್ರ ಸ್ವರೂಪದಲ್ಲಿರುವ ಸದಸ್ಯರನ್ನು ಶಮನಗೊಳಿಸುವ ನಿಟ್ಟಿನಲ್ಲಿ ವಿವಿಧ ಗಣ್ಯರ ಮೂಲಕ ಮಾತುಕತೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net