ಮಿತ್ತೂರಿನಲ್ಲಿಯೂ ಸಹಕಾರಿಯ ತನಿಖೆ

Published on

ಪುತ್ತೂರು: ಮಾದರಿ ಸಹಕಾರಿ ಸಂಘದಲ್ಲಿ ಸಾಲ ನೀಡುವ ಸಂದರ್ಭ ನಿಯಮಗಳನ್ನು ಗಾಳಿಗೆ ತೂರಿದ ಆರೋಪದ ತನಿಖೆ ಶುಕ್ರವಾರ ಮಿತ್ತೂರಿನಲ್ಲಿ ನಡೆದಿದ್ದು, ಕಾನೂನು ತೊಡಕಿನಲ್ಲಿ ನೀಡಲಾದ ಸಾಲದ ಬಗ್ಗೆ ಕೈಗೊಳ್ಳುವ ಕ್ರಮ ಕುತೂಹಲ ಮೂಡಿಸಿದೆ.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಶಾಖಾ ವ್ಯವಸ್ಥಾಪಕರ ಸಮ್ಮುಖದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ತಂಡದಿಂದ ತನಿಖೆ ನಡೆದಿದೆ. ಅಧ್ಯಕ್ಷರು ಹಾಗೂ ನಿರ್ದೇಶಕ ಮಂಡಳಿ ಈ ಸಂದರ್ಭ ಗೈರಾಗಿದ್ದು, ಹಿರಿಯ ಸದಸ್ಯರೊಬ್ಬರು ತನಿಖೆ ಸಂದರ್ಭ ಹಾಜರಿದ್ದರೆಂದು ಹೇಳಲಾಗಿದೆ. ಇವರ ಹಾಗೂ ತನಿಖೆಯ ವಿಚಾರ ತಿಳಿದು ಆಗಮಿಸಿದ ಹಿರಿಯ ಸದಸ್ಯರೊಬ್ಬರ ನಡುವೆ ಕಾನೂನು ಮೀರಿ ಸಾಲ ನೀಡಿದ ವಿಚಾರದಲ್ಲಿ ಮಾತಿನ ಚಕಮಕಿಯೂ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮುಜುಗರ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸುವ ನಿಟ್ಟಿನಲ್ಲಿ ಪಕ್ಷದಿಂದ ತಯಾರಿ ನಡೆಯುತ್ತಿದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net