ಸಂಘಗಳ ಕಾರ್ಯಕ್ಕೆ ಸಚಿವೆ ಜೊಲ್ಲೆ ಶ್ಲಾಘನೆ

24npn1-Web
ನಿಪ್ಪಾಣಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅವರು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಥರ್ಮಲ್ ಸ್ಕ್ರೀನಿಂಗ್ ಯಂತ್ರ ವಿತರಿಸಿದರು. ಡಾ. ಸೀಮಾ ಗುಂಜಾಳ, ಡಾ.ರಾಜೇಶ ಬನವಣೆ, ಸಂತೋಷ ಸತ್ಯನಾಯಿಕ, ರೇವತಿ ಮಠ ಸುನೀಲ ಪಾಟೀಲ ಡಾ.ಚಂದ್ರಕಾಂತ ಕುರಬೆಟ್ಟಿ ಇದ್ದರು.
Published on

ನಿಪ್ಪಾಣಿ: ಸಂಘ-ಸಂಸ್ಥೆಗಳು ಕರೊನಾ ವಿರುದ್ಧದ ಹೋರಾಟಕ್ಕೆ ಸರ್ಕಾರದೊಂದಿಗೆ ಕೈಜೋಡಿಸುತ್ತಿರುವುದು ಶ್ಲಾಘನೀಯ. ಸ್ಥಳೀಯ ಐಎಂಎ ಮತ್ತು ರೋಟರಿ ಕ್ಲಬ್‌ಗಳ ಸಹಕಾರದಿಂದ ನಗರದ ಎಲ್ಲ ವಾರ್ಡ್‌ಗಳಿಗೆ ಥರ್ಮಲ್ ಸ್ಕ್ರೀನಿಂಗ್ ಯಂತ್ರಗಳು ಲಭ್ಯವಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಸ್ಥಳೀಯ ನಗರಸಭೆಯಲ್ಲಿ ಈಚೆಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಥರ್ಮಲ್ ಸ್ಕ್ರೀನಿಂಗ್ ಯಂತ್ರಗಳನ್ನು ವಿತರಿಸಿ ಅವರು ಮಾತನಾಡಿದರು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಎಲ್ಲರೂ ಸಹಕರಿಸಬೇಕು. ಲಾಕ್‌ಡೌನ್ ಆದೇಶ ಕಟ್ಟುನಿಟ್ಟಾಗಿ ಎಲ್ಲರೂ ಪಾಲಿಸುತ್ತಿರುವುದರಿಂದ ತಾಲೂಕಿನಲ್ಲಿ ಕರೊನಾ ಸೋಂಕು ಕಂಡುಬಂದಿಲ್ಲ ಎಂದರು. ಸಂಸದ ಅಣ್ಣಾಸಾಹೇಬ ಜೊಲ್ಲೆ, ಐಎಂಎ ಸ್ಥಳೀಯ ಘಟಕದ ಅಧ್ಯಕ್ಷ ಡಾ.ವಿನಾಯಕ ತಿಳವೆ, ಪೌರಾಯುಕ್ತ ಮಹಾವೀರ ಬೋರಣ್ಣವರ ಮಾತನಾಡಿದರು. 31 ವಾರ್ಡ್ ಕಾರ್ಯಕರ್ತೆಯರಿಗೆ ಯಂತ್ರ ವಿತರಿಸಲಾಯಿತು. ವೈದ್ಯಾಧಿಕಾರಿ ಡಾ. ಸೀಮಾ ಗುಂಜಾಳ, ಡಾ. ರಾಜೇಶ ಬನವಣೆ, ಸಿಪಿಐ ಸಂತೋಷ ಸತ್ಯನಾಯಿಕ, ಬಿಇಒ ರೇವತಿ ಮಠದ, ರೋಟರಿ ಕ್ಲಬ್ ಅಧ್ಯಕ್ಷ ಸುನೀಲ ಪಾಟೀಲ, ಡಾ. ಚಂದ್ರಕಾಂತ ಕುರಬೆಟ್ಟಿ, ದಿಲೀಪ ಪಠಾಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net