ಸಮಾಜಮುಖಿ ಕೆಲಸ ಇತರರಿಗೆ ಮಾದರಿ

noojadi
Published on

ಕುಂದಾಪುರ: ನಮಗೆ ವಿದ್ಯೆ ನೀಡಿ, ಜೀವನ ಕೌಶಲ ಕಲಿಸಿದ, ಶಾಲೆಗಳನ್ನು ಮರೆಯದೆ ಅದರ ಅಭಿವೃದ್ಧಿಗೆ ಕೈಜೋಡಿಸುವುದರಿಂದ ಯಾವುದೇ ಸರ್ಕಾರಿ ಶಾಲೆ ಮುಚ್ಚುವ ಸ್ಥಿತಿ ಬರುವುದಿಲ್ಲ. ನಾವು ಮಾಡುವ ಸಮಾಜಮುಖಿ ಕೆಲಸ ಇತರರಿಗೆ ಮಾದರಿ ಹಾಗೂ ಪ್ರೇರಣೆಯಾಗಬೇಕು ಎಂದು ಬಗ್ವಾಡಿ ಮೆತ್ತಿನ ಮನೆ ವೆಂಕಮ್ಮ ರಾಮಣ್ಣ ಶೆಟ್ಟಿ ಟ್ರಸ್ಟ್ ಆಡಳಿತ ಟ್ರಸ್ಟಿ ಬಿ.ಎನ್.ಶೆಟ್ಟಿ ಹೇಳಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂಜಾಡಿ-2 ಬಗ್ವಾಡಿಯಲ್ಲಿ ಗುರುವಾರ ಕಾರ್ಯಕ್ರಮದಲ್ಲಿ ಶಾಲೆ ಶತಮಾನೋತ್ಸವ ಸಂಭ್ರಮದ ಪೂರ್ವಭಾವಿಯಾಗಿ ನಿರ್ಮಾಣವಾಗಿರುವ ಶತಮಾನೋತ್ಸವ ಭವನದ ಕೀಲಿಕೈ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭವನಕ್ಕೆ ನಿರ್ಮಾಣಕ್ಕೆ ಹಣ ನೀಡಿದ ಬಗ್ವಾಡಿ ಮೆತ್ತಿನ ಮನೆ ವೆಂಕಮ್ಮ ರಾಮಣ್ಣ ಶೆಟ್ಟಿ ಟ್ರಸ್ಟ್ ಹಿರಿಯ ಸದಸ್ಯೆ ಪಾರ್ವತಿ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಬೈಂದೂರು ವಲಯ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ ಅವರಿಗೆ ಶತಮಾನೋತ್ಸವ ಭವನದ ಕೀಲಿ ಕೈ ಹಸ್ತಾಂತರಿಸಿದರು. ಹಕ್ಲಾಡಿ ಗ್ರಾಪಂ ಉಪಾಧ್ಯಕ್ಷ ಸುಭಾಶ್ಚಚಂದ್ರ ಶೆಟ್ಟಿ ಹೊಳ್ಮಗೆ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ವಲಯ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ, ಹಳೇ ವಿದ್ಯಾರ್ಥಿ ಸಂಘ ಗೌರವಾಧ್ಯಕ್ಷ ಬಿ.ರಾಜೀವ ಶೆಟ್ಟಿ, ಟ್ರಸ್ಟ್ ಸಿಂಗಾರಿ ಶೆಟ್ಟಿ, ಶೇಖರ್ ಶೆಟ್ಟಿ ಬೆಂಗಳೂರು, ಶಾಂತಾರಾಮ್ ಶೆಟ್ಟಿ, ಸತೀಶ್ ಶೆಟ್ಟಿ, ದಯಾನಂದ ಶೆಟ್ಟಿ, ಶೀಲಾ ಎನ್.ಶೆಟ್ಟಿ , ವಸಂತಿ ರಾಜ್‌ಗೋಪಾಲ ಶೆಟ್ಟಿ, ಪುರೋಹಿತ ನಾಗಪ್ಪಯ್ಯ ಭಟ್, ಎಸ್‌ಡಿಎಂಸಿ ಅಧ್ಯಕ್ಷ ರಾಧಾಕೃಷ್ಣ ಗಾಣಿಗ, ಗ್ರಾಪಂ ಸದಸ್ಯೆ ಶಾರದಾ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶೈಲಜಾ ಶೆಟ್ಟಿ ಸ್ವಾಗತಿಸಿದರು. ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಪ್ರಕಾಶ್ ಆಚಾರ್ಯ ವಂದಿಸಿದರು. ಸಹ ಶಿಕ್ಷಕಿ ಪೂರ್ಣಿಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net