ನಿವೃತ್ತಿಯ ನಂತರ ಕುಟುಂಬಸ್ಥರೊಂದಿಗೆ ಬೆರೆಯಿರಿ

27-09-Shiva-3
ರಾಯಚೂರಿನ ಸಶಸ ಮೀಸಲು ಪಡೆ ಸಭಾಂಗಣದಲ್ಲಿ ನಿವೃತ್ತ ಪೊಲೀಸ್ ಅಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಏರ್ಪಡಿಸಿದ್ದ ಆರೋಗ್ಯ ಸುಧಾರಣೆ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಎಸ್ಪಿ ಬಿ.ನಿಖಿಲ್ ಮಾತನಾಡಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಆರ್.ಶಿವಕುಮಾರ, ಸಶಸ ಮೀಸಲು ಪಡೆ ಡಿವೈಎಸ್ಪಿ ಪ್ರಮೋದ್ ಗೋಡ್ಕೆ, ಸಂಘದ ಅಧ್ಯಕ್ಷ ರಾಮಣ್ಣ ಉಪಸ್ಥಿತರಿದ್ದರು.
Published on

ರಾಯಚೂರು: ನಿವೃತ್ತಿಯ ನಂತರ ಕುಟುಂಬಸ್ಥರೊಂದಿಗೆ ಹೆಚ್ಚಾಗಿ ಬೆರೆತು ಬಾಳುವ ಮೂಲಕ ಮಕ್ಕಳೊಂದಿಗೆ ಸೇವಾವಯ ಅನುಭವಗಳನ್ನು ಹಂಚಿಕೊಂಡು ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಬಿ.ನಿಖಿಲ್ ಹೇಳಿದರು.
ಸ್ಥಳೀಯ ಜಿಲ್ಲಾ ಸಶಸ ಮೀಸಲು ಪಡೆ ಸಭಾಂಗಣದಲ್ಲಿ ನಿವೃತ್ತ ಪೊಲೀಸ್ ಅಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆರೋಗ್ಯ ಸುಧಾರಣೆ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ನಿವೃತ್ತ ಅಕಾರಿಗಳು ಮಕ್ಕಳಿಗೆ ಮಾರ್ಗದರ್ಶಕರಾಗಬೇಕು. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದರ ಜತೆಗೆ ಸರ್ಕಾರದಿಂದ ನೀಡಲಾಗುವ ಉಚಿತ ಆರೋಗ್ಯ ಸೇವೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ನಿವೃತ್ತ ಪೊಲೀಸ್ ಅಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಮಣ್ಣ ಮಾತನಾಡಿ, ನಿವೃತ್ತಿಯ ನಂತರದಲ್ಲಿ ಇಲಾಖೆಯಿಂದ ಹೊರಬಂದಾಗ ನಮ್ಮನ್ನು ಗುರುತಿಸುವುದು ಬಹಳ ಕಡಿಮೆಯಾಗಿದೆ. ನಿವೃತ್ತಿಯ ನಂತರವೂ ಸಂಘದ ಸದಸ್ಯರು ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಆರ್.ಶಿವಕುಮಾರ, ಸಶಸ ಮೀಸಲು ಪಡೆ ಡಿವೈಎಸ್ಪಿ ಪ್ರಮೋದ್ ಗೋಡ್ಕೆ, ಸಂಘದ ಪದಾಕಾರಿಗಳಾದ ಭೀಮರಾಯ, ಚೆನ್ನಪ್ಪ, ನರಸಿಂಗಪ್ಪ, ಅಬ್ದುಲ್ ರಶೀದ್, ಸುಜಾತಾ, ಪದ್ಮಾವತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net