

ಬೆಳಗಾವಿ: ಕಳೆದ 9 ವರ್ಷದ ಹಿಂದೆ ಹುಟ್ಟಿಕೊಂಡ ಬೆಳಗಾವಿ ಡೆವಲಪಮೆಂಟ್ ಪೆನಲ್ನಿಂದಾಗಿ ನಗರ ವಾಣಿಜ್ಯೋದ್ಯಮ ಸಂದ ಕಾರ್ಯವೈಖರಿ ಸಮಾಜಮುಖಿಯಾಗಿ ಬದಲಾಗಿದೆ ಎಂದು ಉದ್ಯಮಿ ಚೈತನ್ಯ ಕುಲಕರ್ಣಿ ಹೇಳಿದರು.
ನಗರದ ಚೇಂಬರ್ ಆಫ್ ಕಾಮರ್ಸ್ ಕಚೇರಿಯಲ್ಲಿ ಈಚೆಗೆ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಹಿಂದೆಲ್ಲೆ ವಾಣಿಜ್ಯೋದ್ಯಮ ಸಂ ಕ್ರಿಯಾಶೀಲವಾಗಿರಲಿಲ್ಲ. ವಾಣಿಜ್ಯೋದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿರಲಿಲ್ಲ ಎನ್ನುವ ಆರೋಪವಿತ್ತು. ನಂತರ ಸಮಾನ ಮನಸ್ಕರನ್ನೆಲ್ಲ ಸೇರಿಸಿ ಬೆಳಗಾವಿ ಡೆವಲಪಮೆಂಟ್ ಪೆನಲ್ ರಚಿಸಲಾಯಿತು. ಇಂದು ಸಂಪೂರ್ಣ ಆಡಳಿತ ಪೆನಲ್ ಹಿಡಿತಕ್ಕೆ ಬಂದಿದೆ. ಜತೆಗೆ ಸಮಾಜಮುಖಿಯಾಗಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸದಸ್ಯ ಸಚಿನ್ ಸಬ್ನಿಸ್ ಮಾತನಾಡಿದರು. ಚೆಂಬರ್ ಆಫ್ ಕಾಮರ್ಸ್ ಅಧ್ಯ ಪ್ರಭಾಕರ ನಾಗರಮುನ್ನೋಳಿ, ಕಾರ್ಯದರ್ಶಿ ಸತೀಶ್ ಕುಲಕರ್ಣಿ, ಉಪಾಧ್ಯರಾದ ಸ್ವಪ್ನಿಲ್ ಶಹಾ, ಉದಯ ಜೋಶಿ, ಖಜಾಂಚಿ ಸಂಜಯ ಪೋತದಾರ, ರೋಹನ್ ಜವಳಿ, ಶ್ರೀಧರ ಉಪ್ಪಿನ, ಸಂಜೀವ ಕತ್ತಿಶೆಟ್ಟಿ, ಸಿ.ಸಿ.ಹೊಂಡದಕಟ್ಟಿ, ರಾಜೇಂದ್ರ ಮುತಗೇಕರ್, ಕೀತ್ ಮಚಾಡೋ, ರಾಜೇಶ ಮುಚ್ಚಂಡಿಕರ್, ವಿನೀತ ಹರಕುಣಿ, ರೋಹಿತ್ ಕಪಾಡಿಯಾ, ಎಂ.ಕೆ.ಹೆಗಡೆ ಇತರರಿದ್ದರು.