ವಾಸವಿ ಕ್ಲಬ್‌ನಿಂದ ಸಾಮಾಜಿಕ ಕಾರ್ಯ

16ark-3
Published on

ಅರಕಲಗೂಡು: ವಾಸವಿ ಕ್ಲಬ್ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡು ವಿವಿಧ ಕ್ಷೇತ್ರಗಳ ಏಳಿಗೆಗೆ ಕೈಲಾದ ಕೊಡುಗೆ ನೀಡುತ್ತಿದೆ ಎಂದು ಕ್ಲಬ್‌ನ ರಿಜನಲ್ ಅಧ್ಯಕ್ಷ ಎ.ಜಿ.ರಾಮನಾಥ್ ಹೇಳಿದರು.

ಪಟ್ಟಣದ ಎವಿಕೆ ಅಕಾಡೆಮಿ ಶಾಲಾ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕ್ಲಬ್‌ನ ಸಮಾವೇಶದಲ್ಲಿ ಮಾತನಾಡಿದ ಅವರು, ಶಿಕ್ಷಣ, ಸಾಮಾಜಿಕ ಕ್ಷೇತ್ರಗಳಲ್ಲಿ ಕ್ಲಬ್ ಹಲವಾರು ವರ್ಷಗಳಿಂದ ಉತ್ತಮ ಜನಸೇವೆ ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಡಾ. ರಮ್ಯಾ, ಕೆ.ಎಸ್.ವರದರಾಜುಲು, ಸಿ.ಎಸ್.ವೆಂಕಟೇಶ್, ಎಂ.ವಿ.ಸುಧೀರ್ ಬಾಬು, ರಾಜೇಂದ್ರಕುಮಾರ್, ಎ.ಆರ್. ರವಿಕುಮಾರ್, ಎಸ್. ಗೋಕುಲ್, ವಾಸವಿ ಕ್ಲಬ್ ವನಿತಾ ಅಧ್ಯಕ್ಷೆ ರೇಖಾ ರಾಜೇಂದ್ರ ಇತರರಿದ್ದರು. ಇದೇ ಸಂದರ್ಭದಲ್ಲಿ ಜೈಭೀಮ್ ನಗರದ ಸರ್ಕಾರಿ ಶಾಲೆಗೆ ಸ್ಕೂಲ್ ಡೆಸ್ಕ್ ಮತ್ತು ನೋಟ್‌ಪುಸ್ತಕ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net