

ಹುಬ್ಬಳ್ಳಿ: ಪೂರ್ವಜನರ ಸಮಾಜ ಸೇವೆಯನ್ನು ಸ್ಮರಿಸುವ ಕಾರ್ಯ ನಡೆಯಬೇಕು. ಈ ನಿಟ್ಟಿನಲ್ಲಿ ಕೊರವಿ ಕುಟುಂಬದವರು ಹಿರಿಯ ಹೆಸರಿನಲ್ಲಿ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳು ಶ್ರೇಷ್ಠವಾಗಿವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ದಿ. ಮೂರುಸಾವಿರಪ್ಪ ಕೊರವಿ ಅವರ ಐದನೇ ಪುಣ್ಯ ಸ್ಮರಣೆ ನಿಮಿತ್ತ ನಿರ್ಮಲಾ ಫೌಂಡೇಷನ್ ವತಿಯಿಂದ ಇಲ್ಲಿಯ ಉಣಕಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕೊರವಿ ಕುಟುಂಬದವರು ಬಡವರಿಗಾಗಿ ಉಪಯುಕ್ತ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.
ಮೇಯರ್ ಜ್ಯೋತಿ ಪಾಟೀಲ ಮಾತನಾಡಿ, ಸಮಾಜ ಸೇವೆ ಮಾಡುವಲ್ಲಿ ರಾಜಣ್ಣ ಕೊರವಿ ಅವರು ಸದಾ ಮುಂದೆ ಎಂದರು.
ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಅಧ್ಯಕ್ಷತೆ ವಹಿಸಿದ್ದರು.
ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಉಮೇಶಗೌಡ ಕೌಜಗೇರಿ, ಪ್ರಮುಖರಾದ ಬಸವರಾಜ ಹೆಬ್ಬಳ್ಳಿ, ಪರಶುರಾಮ ಹೊಂಬಳ, ಚೆನ್ನು ಪಾಟೀಲ, ಶಿವಾಜಿ ಕನ್ನಕೊಪ್ಪ, ಶಂಕರಣ್ಣ ಕೊಕಾಟಿ, ಗುರುಸಿದ್ದಪ್ಪ ಮೆಣಸಿನಕಾಯಿ, ಮಲ್ಲಿಕಾರ್ಜುನ ಮೆಣಸಿನಕಾಯಿ, ಡಾ. ಲಿಂಗರಾಜ ಅಂಗಡಿ, ಡಾ. ಆದಿತ್ಯ, ಡಾ. ಆದಿನಾರಾಯಣ, ಡಾ. ವಿಶ್ವನಾಥ ಕೊರವಿ ಇತರರು ಇದ್ದರು.