ಲೋಕಮಾನ್ಯ ಸೊಸೈಟಿಯಿಂದ ಸಾಮಾಜಿಕ ಕಾರ್ಯ

IMG20250227205437.jpg
Published on

ಬೆಳಗಾವಿ: ಲೋಕಮಾನ್ಯ ಸೊಸೈಟಿಯು ಸಾಮಾಜಿಕ ಕಾರ್ಯ ಕೈಗೊಂಡು ಜನರಿಗೆ ಹತ್ತಿರವಾಗುತ್ತಿದೆ ಎಂದು ಡಾ. ಸೂರಜ್ ಜೋಶಿ ಹೇಳಿದರು.

ಕೋನವಾಳ ಗಲ್ಲಿಯ ಲೋಕಮಾನ್ಯ ರಂಗಮಂದಿರದಲ್ಲಿ ಗುರುವಾರ ಸೊಸೈಟಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸೊಸೈಟಿ ತನ್ನ ಕಾರ್ಯದ ಜತೆ ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತಿದೆ. ರಕ್ತದಾನ ಶಿಬಿರಗಳನ್ನು ಏರ್ಪಡಿಸುವ ಮೂಲಕ ಇತರರಿಗೆ ನೆರವಾಗುತ್ತಿದೆ. ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು.

ಸೊಸೈಟಿ ನಿರ್ದೇಶಕ ಪಂಢರಿ ಪರಬ್ ಮಾತನಾಡಿ, ಡಾ. ಕಿರಣ ಠಾಕೂರ ಮಾರ್ಗದರ್ಶನದಲ್ಲಿ ಪ್ರತಿವರ್ಷ ಕೆಎಲ್ಇ ಆಸ್ಪತ್ರೆ ಸಹಯೋಗದೊಂದಿಗೆ ರಕ್ತದಾನ ಶಿಬಿರ ಆಯೋಜಿಸುತ್ತಿದ್ದೇವೆ. ಸಮಾಜಕ್ಕೆ ಸೇವೆ ಸಲ್ಲಿಸಲು ಬದ್ಧರಾಗಿದ್ದೇವೆ ಎಂದರು.

ಸೊಸೈಟಿ ಉಪಾಧ್ಯಕ್ಷ ಅಜಿತ್ ಗರ್ಗಟ್ಟಿ, ನಿರ್ದೇಶಕರಾದ ಗಜಾನನ ಧಾಮ್ನೇಕರ, ಪಂಢರಿ ಪರಬ್, ಸುಬೋಧ ಗಾವ್ಡೆ, ಮುಖ್ಯ ಭದ್ರತಾ ಅಧಿಕಾರಿ ಕರ್ನಲ್ ದೀಪಕ ಗುರುಂಗ್, ಬೆಳಗಾವಿ ಪ್ರಾದೇಶಿಕ ವ್ಯವಸ್ಥಾಪಕ ಮಧುಕರ್ ಕುಲಕರ್ಣಿ ಮತ್ತು ಕೆಎಲ್ಇ ಆಸ್ಪತ್ರೆ ಡಾ. ಮಾನೆ ಇದ್ದರು. ಸೊಸೈಟಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಸತ್ಯವ್ರತ ನಾಯಕ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net