

ಮದ್ದೂರು: ಲಯನ್ಸ್ ಸಂಸ್ಥೆ ಸಮಾಜಮುಖಿ ಕಾರ್ಯಕ್ರಮ ಮಾಡುವ ಮೂಲಕ ನೊಂದವರ ಬಾಳಿಗೆ ಬೆಳಕಾಗಿದೆ ಎಂದು ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟದ ಜಿಲ್ಲಾ ಪ್ರಾಂತಪಾಲ ಲಯನ್ ಡಾ.ಎನ್.ಕೃಷ್ಣೇಗೌಡ ತಿಳಿಸಿದರು.
ಪಟ್ಟಣದ ಸಿರಿ ಆದರ್ಶ ಚಿಟ್ಸ್ ಪ್ರವೇಟ್ ಲಿಮಿಟೆಡ್ ಕಚೇರಿಯಲ್ಲಿ ಇತ್ತೀಚೆಗೆ ಲಯನ್ಸ್ ಸಂಸ್ಥೆ ವತಿಯಿಂದ ವಳಗೆರೆಹಳ್ಳಿಯ ನಿಶಾಂತ್‌ಗೌಡ ಎಂಬ ವಿದ್ಯಾರ್ಥಿಗೆ ಉಚಿತವಾಗಿ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದರು. ವಿದ್ಯಾರ್ಥಿಗಳು, ಅಂಗವಿಕಲರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದವರಿಗೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಪ್ರಶಂಸೆ ವ್ಯಕ್ತಡಿಸಿದರು.
ಮದ್ದೂರು ಲಯನ್ಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವಿ.ಕೆ.ಜಗದೀಶ್, ಅಧ್ಯಕ್ಷ ಎಂ.ಎಚ್.ಸಿದ್ದೇಗೌಡ, ಕಾರ್ಯದರ್ಶಿ ಸಿದ್ದಯ್ಯ, ಖಜಾಂಚಿ ಕೆ.ಆರ್.ದಿನೇಶ್, ಎಸ್.ಪಿ.ಆದರ್ಶ್, ಕೆ.ಎಸ್.ಸುನೀಲ್‌ಕುಮಾರ್ ಉಪಸ್ಥಿತರಿದ್ದರು.