

ಮಡಿಕೇರಿ: ಕುಶಾಲನಗರದ ಧಾತ್ರಿ ಕನ್‌ಸ್ಟ್ರಕ್ಷನ್ ವತಿಯಿಂದ ಮಹಿಳಾ ಸಮಾಜದ ನರ್ಸರಿ ಆವರಣವನ್ನು ಶುಕ್ರವಾರ ಉಚಿತವಾಗಿ ಸಮತಟ್ಟು ಗೊಳಿಸಲಾಯಿತು.
ಸಂಸ್ಥೆ ಮಾಲೀಕ ಬಾಲಕಷ್ಣ ಅವರ ಪುತ್ರಿ ಧಾತ್ರಿ ಇದೇ ಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದು, ಆಕೆಯ 4ನೇ ವರ್ಷದ ಹುಟ್ಟುಹಬ್ಬದ ನೆನಪಿಗಾಗಿ ನರ್ಸರಿ ಆವರಣವನ್ನು ಉಚಿತವಾಗಿ ಸಮತಟ್ಟುಗೊಳಿಸಲಾಯಿತು.
ಸಂಸ್ಥೆಯಲ್ಲಿ ನೂರಾರು ಪುಟ್ಟ ಮಕ್ಕಳು ಕಲಿಯುತ್ತಿದ್ದು, ಅವರ ಆಟೋಟ ಚಟುವಟಿಕೆ ಹಾಗೂ ಮತ್ತಿತರ ಕಾರ್ಯಕ್ರಮಗಳಿಗೆ ಸಹಕಾರವಾಗುವ ನಿಟ್ಟಿನಲ್ಲಿ ಕಾಮಗಾರಿ ನಡೆಸಲಾಯಿತು. ಕಳೆದ 4 ವರ್ಷಗಳಿಂದಲೂ ಕೂಡ ಪ್ರತಿ ವರ್ಷ ತಮ್ಮ ಪುತ್ರಿಯ ಹುಟ್ಟುಹಬ್ಬಕ್ಕೆ ಬಾಲಕಷ್ಣ ಅವರು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಜನಮನ್ನಣೆಗಳಿಸಿದೆ.
ಬಾಲಕಷ್ಣ ಅವರ ಪತ್ನಿ ಶತಿ, ಮಹಿಳಾ ಸಮಾಜದ ಕಾರ್ಯದರ್ಶಿ ಶೈಲಾ ಮತ್ತು ಸಿಬ್ಬಂದಿ ಇದ್ದರು.