ಕೆನರಾ ಬ್ಯಾಂಕ್‌ನಿಂದ ಸಮಾಜಮುಖಿ ಕಾರ್ಯ

ಕೆ.ಆರ್.ನಗರದ ಆಂಜನೇಯ ಬಡಾವಣೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಕೆನರಾ ಬ್ಯಾಂಕ್ ಸಂಸ್ಥಾಪನಾ ದಿನ 120 ವರ್ಷಾಚರಣೆ ಅಂಗವಾಗಿ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಬಿಇಒ ಆರ್.ಕೃಷ್ಣಪ್ಪ ಸಸಿ ನೆಡುವ ಮೂಲಕ ಚಾಲನೆ ನೀಡಿದರು. ಪಿ.ಎಸ್.ಉಮೇಶ್, ಕೆ.ರಾಜೇಶ್, ರಂಜಿತ್ ಹೊರೋ, ಎಚ್.ಎಸ್.ಸ್ವಾಮಿ, ಕೆ.ವಿರೇಶ್, ಲತಾ, ಪ್ರಭಾಕರ್, ಕೆ.ಎನ್.ಪ್ರಸನ್ನಕುಮಾರ್, ವೈ.ಎಸ್.ಕುಮಾರ್ ಇತರರು ಇದ್ದರು.
ಕೆ.ಆರ್.ನಗರದ ಆಂಜನೇಯ ಬಡಾವಣೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಕೆನರಾ ಬ್ಯಾಂಕ್ ಸಂಸ್ಥಾಪನಾ ದಿನ 120 ವರ್ಷಾಚರಣೆ ಅಂಗವಾಗಿ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಬಿಇಒ ಆರ್.ಕೃಷ್ಣಪ್ಪ ಸಸಿ ನೆಡುವ ಮೂಲಕ ಚಾಲನೆ ನೀಡಿದರು. ಪಿ.ಎಸ್.ಉಮೇಶ್, ಕೆ.ರಾಜೇಶ್, ರಂಜಿತ್ ಹೊರೋ, ಎಚ್.ಎಸ್.ಸ್ವಾಮಿ, ಕೆ.ವಿರೇಶ್, ಲತಾ, ಪ್ರಭಾಕರ್, ಕೆ.ಎನ್.ಪ್ರಸನ್ನಕುಮಾರ್, ವೈ.ಎಸ್.ಕುಮಾರ್ ಇತರರು ಇದ್ದರು.
Published on

ಕೆ.ಆರ್.ನಗರ: ಕೆನರಾ ಬ್ಯಾಂಕ್ ಸ್ಥಾಪನೆಯಾಗಿ 120 ವರ್ಷ ಪೂರ್ಣಗೊಂಡಿದ್ದು, ಕೇವಲ ಹಣ ಕೊಡುವುದು ಮತ್ತು ಪಡೆಯುವುದಲ್ಲದೆ ಸಾಮಾಜಿಕ ಕಾರ್ಯಕ್ರಮಗಳನ್ನು ಸಹ ಮಾಡಿಕೊಂಡು ಬರಲಾಗುತ್ತಿದೆ ಎಂದು ಕೆನರಾ ಬ್ಯಾಂಕ್ ಮೈಸೂರು ಗ್ರಾಮಾಂತರ ಪ್ರಾದೇಶಿಕ ಕಚೇರಿ ಪ್ರಧಾನ ವ್ಯವಸ್ಥಾಪಕ ಪಿ.ಎಸ್.ಉಮೇಶ್ ಹೇಳಿದರು.

ಪಟ್ಟಣದ ಆಂಜನೇಯ ಬಡಾವಣೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆ.ಆರ್.ನಗರ ಶಾಖೆಯ ಕೆನರಾ ಬ್ಯಾಂಕ್ ವತಿಯಿಂದ ಶನಿವಾರ ಆಯೋಜಿಸಿದ್ದ ಕೆನರಾ ಬ್ಯಾಂಕ್ ಸಂಸ್ಥಾಪನಾ ದಿನ 120 ವರ್ಷಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾನತಾಡಿದರು.

1906ರ ಜುಲೈನಲ್ಲಿ ಮಂಗಳೂರಿನಿಂದ ಪ್ರಾರಂಭವಾಯಿತು. ಬಡವರು ಕೂಡ ಬ್ಯಾಂಕ್ ಖಾತೆ ತೆರೆದು ಉಳಿತಾಯ ಮಾಡುವ ಜತೆಗೆ ಸುಲಭ ಬಡ್ಡಿ ದರದಲ್ಲಿ ಸಾಲ ಸೌಲಭ್ಯದ ಮೂಲಕ ವ್ಯವಹಾರ ಮಾಡಬೇಕೆಂಬುದು ಬ್ಯಾಂಕ್‌ನ ಮೂಲ ಉದ್ದೇಶ ಹೊಂದಿದೆ. ನಮ್ಮ ಬ್ಯಾಂಕ್ ಹಣದ ವ್ಯವಹಾರ ಮಾತ್ರವಲ್ಲದೆ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ಅದರಲ್ಲಿ ಕೆನರಾ ಶಾಲೆಯು ಒಂದಾಗಿದ್ದು, ಅದರಲ್ಲಿ 10 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಜತೆಗೆ ಕೆನರಾ ವಿದ್ಯಾಜ್ಯೋತಿ ಹೆಸರಿನಲ್ಲಿ ಸರ್ಕಾರಿ ಶಾಲೆಯ ಪ್ರತಿಭಾನ್ವಿತ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಶೌಚಗೃಹ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಫಿಲ್ಟರ್‌ಗಳ ಕೊಡುಗೆ ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ 3ನೇ ಸ್ಥಾನದಲ್ಲಿರುವ ನಮ್ಮ ಬ್ಯಾಂಕ್ ಪರಿಸರ ಸಂರಕ್ಷಣೆಯ ಕಾಳಜಿ ಹೊಂದಿದ್ದು, ದೇಶದಾದ್ಯಂತ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಬ್ಯಾಂಕ್ ಬೆಳೆದಿರುವಂತೆ ಮರ, ಗಿಡಗಳನ್ನು ಬೆಳೆಸಿ ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಈ ಶಾಲೆಗೆ 15 ದಿನಗಳೊಳಗೆ ಕುಡಿಯುವ ನೀರಿನ ಫಿಲ್ಟರನ್ನು ಬ್ಯಾಂಕ್ ವತಿಯಿಂದ ಕೊಡಲಾಗುವುದು ಎಂದು ಭರವಸೆ ನೀಡಿದರು.

ಕ್ಷೇತ್ರಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ ಮಾತನಾಡಿ, ನಮ್ಮ ಮೈಸೂರು ಅರಸರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪ್ರಾರಂಭಿಸಿದ ಸಮಯದಲ್ಲೇ ಜನ್ಮ ತಾಳಿದ ಕೆನರಾ ಬ್ಯಾಂಕ್ ಭಾರತೀಯ ಬ್ಯಾಂಕ್‌ಗಳ ಪರಂಪರೆಯಲ್ಲಿ ಒಂದಾಗಿದ್ದು, ಕರಾವಳಿ ತೀರ ಪ್ರದೇಶ ಬ್ಯಾಂಕ್‌ಗಳ ಉಗಮ ಸ್ಥಾನವಾಗಿದೆ. ಈ ಬ್ಯಾಂಕ್ 25 ಲಕ್ಷ ರೂ. ಕೋಟಿ ವ್ಯವಹಾರ, 9 ಸಾವಿರ ಬ್ರಾಂಚ್‌ಗಳು, 10 ಸಾವಿರ ಎಟಿಎಂಗಳನ್ನು ಹೊಂದಿದೆ ಎಂದರು.

ಗ್ರಾಹಕರೊಂದಿಗೆ ಉತ್ತಮ ಒಡನಾಟ ಹೊಂದಿರುವ ಈ ಬ್ಯಾಂಕ್ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿರುವುದು ಸಂತಸದ ವಿಷಯವಾಗಿದೆ. ಅರಣ್ಯ ಬೆಳೆಸುವ ಕಾರ್ಯಯಕ್ಕೆ ಹೆಚ್ಚು ಒತ್ತು ನೀಡಲಿ ಎಂದು ಆಶಿಸಿದರು. ಅಲ್ಲದೆ ವಿದ್ಯಾರ್ಥಿಗಳು ಬ್ಯಾಂಕ್ ಖಾತೆ ತೆರೆಯುವ ಮೂಲಕ ಬ್ಯಾಂಕ್ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಕೆ.ಆರ್.ನಗರ ಶಾಖಾ ಮುಖ್ಯವ್ಯವಸ್ಥಾಪಕ ರಂಜಿತ್ ಹೊರೋ, ಶಾಲೆ ಮುಖ್ಯಶಿಕ್ಷಕಿ ಲತಾ ಮಾತನಾಡಿದರು. ನಂತರ ಶಾಲೆ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರೆರಯಲಾಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪ್ರಭಾಕರ್, ಕೆನರಾ ಬ್ಯಾಂಕ್ ಮೈಸೂರು ಗ್ರಾಮಾಂತರ ಪ್ರಾದೇಶಿಕ ಕಚೇರಿ ವಿಭಾಗೀಯ ವ್ಯವಸ್ಥಾಪಕ ಕೆ.ರಾಜೇಶ್, ಕೆ.ಆರ್.ನಗರ ಶಾಖೆ ಹಿರಿಯ ವ್ಯವಸ್ಥಾಪಕ ಎಚ್.ಎಸ್.ಸ್ವಾಮಿ, ವ್ಯವಸ್ಥಾಪಕ ಕೆ.ವಿರೇಶ್, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಕೆ.ಎನ್.ಪ್ರಸನ್ನಕುಮಾರ್, ಮಾಜಿ ಅಧ್ಯಕ್ಷ ವೈ.ಎಸ್.ಕುಮಾರ್, ಮುಖಂಡರಾದ ಶ್ರೀನಿವಾಸ್, ಅಶೋಕ್‌ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net