ಸಮಾಜ ಕಲ್ಯಾಣ ಇಲಾಖೆ ನೌಕರರ ಕ್ರೀಡಾಕೂಟ : ಮೈಸೂರಿನ ತಂಡಕ್ಕೆ ಬಹುಮಾನ

Social Welfare Department Employees' Sports Meet
Published on

ಮೈಸೂರು: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಮಾಜ ಕಲ್ಯಾಣ ಇಲಾಖೆಯ ನೌಕರ ವರ್ಗದವರಿಗೆ ರಾಜ್ಯಮಟ್ಟದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ( ಜಿಕೆವಿಕೆ) ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.

ಸಮೂಹ ಗಾಯನ ಜನಪದ ಗೀತೆ ಮತ್ತು ಥ್ರೋಬಾಲ್ ಮಹಿಳಾ ವಿಭಾಗದಲ್ಲಿ ಮೈಸೂರು ಸಮಾಜ ಕಲ್ಯಾಣ ಇಲಾಖೆಯು ಪ್ರಥಮ ಸ್ಥಾನ ಪಡೆಯಿತು. ರಾಜ್ಯ ಮಟ್ಟದ ಥ್ರೋಬಾಲ್ ಆಟದಲ್ಲಿ ಶಶಿಕಲಾ ಮತ್ತು ತಂಡ ಪ್ರಥಮ ಸ್ಥಾನ ಪಡೆಯಿತು. ಸಮೂಹ ಗಾಯನ ಜನಪದ ಗೀತೆಯಲ್ಲಿ ಇಲಾಖೆಯ ನೌಕರರಾದ ಹಿರಿಯ ನಿಲಯ ಪಾಲಕ ಮಾಂತೇಶ ಮಾಟೊಳಿ ಮತ್ತು ತಂಡ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿತು.

ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಡಾ. ರಾಕೇಶ್ ಕುಮಾರ್ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಟ್ರೋಫಿ ನೀಡಿದರು. ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ ರಂಗೇಗೌಡ, ಸಂಗೀತ ನಿರ್ದೇಶಕ ರವಿರಾಜ್, ಕಲಾವಿದ ಸಂಜಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net