ಸಮಾಜ ಕಲ್ಯಾಣ ಇಲಾಖೆಯ 6 ತಿಂಗಳ ವೇತನ ಬಾಕಿ, ಸಂಕಷ್ಟದಲ್ಲಿ ಗುತ್ತಿಗೆ ಸಿಬ್ಬಂದಿ

IMG-20230328-WA0011
Published on

ವಿಜಯವಾಣಿ ಸುದ್ದಿಜಾಲ ದಗ
ಎಸ್ಸಿ, ಎಸ್ಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರ ವರ್ಗಾಹಿಸಿದ ಹಿನ್ನೆಲೆ ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವು ಜಿಲ್ಲೆಯ ಎಸ್ಸಿ, ಎಸ್ಟಿ ಹಾಸ್ಟೆಲ್​ ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 150ಕ್ಕೂ ಅಧಿಕ ಗುತ್ತಿಗೆ ಸಿಬ್ಬಂದಿಗಳಿಗೆ ಕಳೆದ 6 ತಿಂಗಳಿಂದ ವೇತನ ಬಾಕಿ ಉಳಿದಿದೆ. ವೇತನ ಬಾರದ ಹಿನ್ನೆಲೆ ಸಿಬ್ಬಂದಿಗಳ ಜೀವನ ನಿರ್ವಹಣೆ ಕಷ್ಟವಾಗಿದ್ದರು, ವೇತನಕ್ಕಾಗಿ ಬಕಪಗಳಂತೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ವೇತನ ಬಾರದ ಹಿನ್ನೆಲೆ ಜೀವನ ನಿರ್ವಹಣೆಗಾಗಿ ಸಾಲದ ಸುಳಿಯಲ್ಲಿ ಹಲವರು ಸಿಲುಕ್ಕಿದ್ದು, ಸಾಲಗಾರರ ಕಾಟವು ಅಧಿಕವಾಗಿದೆ ಎಂದು ಸಿಬ್ಬಂದಿಗಳು ನೋವು ತೋಡಿಕೊಂಡಿದ್ದಾರೆ.
ಎಸ್ಸೆಸ್ಸೆಲ್ಸಿ ನಂತರದ ಹಾಗೂ ಹೈಸ್ಕೂಲ್​ ಹಾಸ್ಟೆಲ್​ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ನೌಕರರಾದ ಅಡುಗೆದಾರರು, ಸಹಾಯಕರು ಮತ್ತು ವಾಚಮನ್​ ಸಿಬ್ಬಂದಿಗಳ ವೇತನ ಬಾಕಿ ಇದೆ. ಗುತ್ತಿಗೆ ಸಿಬ್ಬಂದಿ ವೇತನ ಪಾವತಿಗೆ ಗುತ್ತಿಗೆ ಪಡೆದ ಖಾಸಗಿ ಏಜನ್ಸಿಯ ಅವಧಿ ಮಾರ್ಚ 2024ಕ್ಕೆ ಅಂತ್ಯವಾಗಿದೆ. ಹೊಸ ಗುತ್ತಿಗೆದಾರನಿಗೆ ಗುತ್ತಿಗೆ ನೀಡುವ ಆಡಳಿತಾತ್ಮ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆದರೆ, ಈ ಹಿಂದಿನ 6 ತಿಂಗಳ ವೇತನ ಪಾವತಿ ಆಗುವುದೋ? ಇಲ್ಲವೋ ಎಂಬ ಆತಂಕ ಸಿಬ್ಬಂದಿಗಳಲ್ಲಿ ಮನೆ ಮಾಡಿದೆ.
ಬಜೆಟ್​ ಇಲ್ಲ:
ಸರ್ಕಾರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಅನುದಾನ ಕೊರತೆ ಆಗಿದೆ. ಈ ಹಿನ್ನೆಲೆ ಏಜನ್ಸಿಗಳಿಗೆ ಅನುದಾನ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಜಿಲ್ಲೆ ಸೇರಿದಂತೆ ರಾಜ್ಯ 1700 ಕ್ಕೂ ಅಧಿಕ ಸಿಬ್ಬಂದಿಗಳ 8 ತಿಂಗಳ ವೇತನ ಬಾಕಿ ಇದೆ. ಆಥಿರ್ಕ ವರ್ಷದ ಕೊನೆಯಲ್ಲೂ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಕ್ಕೆ ಸೂಕ್ತ ಅನುದಾನ ನೀಡುವಲ್ಲಿ ರಾಜ್ಯ ಸರ್ಕಾರ ವಿಳಂಭ ಧೋರಣೆ ಅನುಸರಿಸುತ್ತಿದೆ. ಸಿಬ್ಬಂದಿಗಳ ವೇತನ ಬಾಕಿ ಪಾವತಿಸುವಂತೆ ಏಜೆನ್ಸಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳು ಏಜೆನ್ಸಿಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ. ಆದರೆ, ಅನುದಾನ ಇಲ್ಲದ ಹಿನ್ನೆಲೆ ಏಜೆನ್ಸಿಗಳಿಗೂ ವೇತನ ಪಾವತಿ ಸಾಧ್ಯವಾಗುತ್ತಿಲ್ಲ. ಸರ್ಕಾರ ಮತ್ತು ಏಜೆನ್ಸಿಗಳ ನಡುವಿನ ಗುದ್ದಾಟದಿಂದ ಗುತ್ತಿಗೆ ನೌಕರರು ಬಡವಾಗುತ್ತಿದ್ದಾರೆ.

ಹೆಚ್ಚುವರಿ ವಿದ್ಯಾಥಿರ್ಗಳು:
ಸಮಾಜಕಲ್ಯಾಣ ಇಲಾಖೆಯ ಹಾಸ್ಟೆಲ್​ಗಳಿಗೆ ಅಜಿರ್ ಸಲ್ಲಿಸಿದ ಎಲ್ಲ ಎಸ್ಸಿ, ಎಸ್ಟಿ ವಿದ್ಯಾಥಿರ್ಗಳಿಗೆ ಪ್ರವೇಶ ನೀಡಬೇಕು ಎಂಬ ಕಾನೂನನ್ನು ಈ ಹಿಂದಿನ ರಾಜ್ಯ ಸರ್ಕಾರ ಜಾರಿ ಮಾಡಿತ್ತು. ಈ ಹಿನ್ನೆಲೆ ಎಲ್ಲ ಹಾಸ್ಟೆಲ್​ಗಳಲ್ಲಿ ನಿಗದಿತ ಸಂಖ್ಯೆಗಳಿಗಿಂತ ಮೂರು ಪಟ್ಟು ಪ್ರವೇಶ ಅಧಿಕಗೊಂಡಿದೆ. 900 ವಿದ್ಯಾಥಿರ್ಳ ಸ್ಥಳದಲ್ಲಿ 2200 ವಿದ್ಯಾಥಿರ್ಗಳ ಪ್ರವೇಶ ಪಡೆಯಲಾಗಿದೆ. ಹೆಚ್ಚುವರಿ ವಿದ್ಯಾಥಿರ್ಗಳಿಗೆ ಅನುಗುಣವಾಗಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ಹೆಚ್ಚುವರಿ ಸಿಬ್ಬಂದಿ ಒಳಗೊಂಡು ಎಲ್ಲ ಸಿಬ್ಬಂದಿಗಳ ವೇತನ ಬಾಕಿ ಇದೆ.

ಕೋಟ್​:
ಸರ್ಕಾರದಿಂದ ಹೆಚ್ಚುವರಿ ಬಜೆಟ್​ ಸದಸ್ಯದಲ್ಲೇ ಬರಲಿದೆ. ವೇತನ ಪಾವತಿ ಸದ್ಯದಲ್ಲೇ ನಡೆಯಲಿದೆ. ಸಿಬ್ಬಂದಿಗಳು ಆತಂಕ ಪಡೆಯಬೇಕಿಲ್ಲ.
- ಪ್ರಶಾಂತ ವರಗಪ್ಪನ್ನವರ, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net