ಸಾಮಾಜಿಕ ಮೌಲ್ಯಗಳ ಅರಿತು ನಡೆಯಿರಿ

Sirigeri Sreee
ಎಂ.ಸೂಗೂರು ಗ್ರಾಮದಲ್ಲಿ ಶ್ರೀ ಗುರುಪಾದೇಶ್ವರ ತಾತನ ದೇವಸ್ಥಾನದ ಅವರಣದಲ್ಲಿ ಸುಳೇಕಲ್ಲು ಭುವನೇಶ್ವೇರ ತಾತ ತುಲಾಭಾರ ಸ್ವೀಕರಿಸಿದರು. ಪ್ರಮುಖರಾದ ಗುರುರಾಜ ಸ್ವಾಮಿ, ಬಾಗೋಡಿ ದೊಡ್ಡ ಬಸವನಗೌಡ, ಸಿದ್ದಲಿಂಗನ ಗೌಡ ಇತರರಿದ್ದರು.
Published on

ಸಿರಿಗೇರಿ: ಶಿಕ್ಷಣದಿಂದ ಜ್ಞಾನವೃದ್ಧಿಯಾದರೆ ಧರ್ಮಾಚರಣೆಯಿಂದ ಭಾವನೆಗಳು ಬೆಳೆಯಲು ಸಾಧ್ಯ ಎಂದು ಸುಳೇಕಲ್ಲು ಭುವನೇಶ್ವೇರ ತಾತ ಹೇಳಿದರು.

ಎಂ.ಸೂಗೂರು ಗ್ರಾಮದ ಶ್ರೀ ಗುರುಪಾದೇಶ್ವರ ತಾತನ ದೇವಸ್ಥಾನದ ಅವರಣದಲ್ಲಿ ಶುಕ್ರವಾರ 79ನೇ ತುಲಾಭಾರ ಸ್ವೀಕರಿಸಿ ಮಾತನಾಡಿದರು.

ಜ್ಞಾನ, ಕ್ರಿಯಾತ್ಮಕ ಬದುಕಿನೊಂದಿಗೆ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದ ಚಿಂತನೆಗಳನ್ನು ಅರಿತು ನಡೆದರೆ ಜೀವನ ಸಾರ್ಥಕವಾಗುತ್ತದೆ. ಪಾಲಕರು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಧಾರ್ಮಿಕ ನೆಲೆಗಟ್ಟಿನಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂದರು.

ಇದಕ್ಕೂ ಮುನ್ನ ಶ್ರೀ ಗುರುಪಾದೇಶ್ವರ ತಾತನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ಬೆಳಗಿನ ಜಾವ ಗುರುಪಾದೇಶ್ವರ ತಾತನ ಮೂರ್ತಿಗೆ ಬಿಲ್ವಾರ್ಚನೆ, ಮಹಾರುದ್ರಾಭಿಷೇಕ, ಭಕ್ತರಿಂದ ದೀರ್ಘದಂಡ ನಮಸ್ಕಾರ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ತಾತನ ವಂಶಸ್ಥರಾದ ಗುರುರಾಜ ಸ್ವಾಮಿ, ಪ್ರಮುಖರಾದ ಬಾಗೋಡಿ ದೊಡ್ಡ ಬಸವನಗೌಡ, ಸಿದ್ದಲಿಂಗನ ಗೌಡ, ಬಾಗೋಡಿ ಅನ್ನಪೂರ್ಣಮ್ಮ, ಶರಣಪ್ಪಗೌಡ, ವೀರೇಶಪ್ಪ, ಪಕ್ಕೀರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net