ಧರ್ಮ ಸಂಸ್ಕಾರದಿಂದ ಮನುಕುಲಕ್ಕೆ ಸಾಂಸತಿಕ ಚೈತನ್ಯ

29 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಧರ್ಮ ಸಿದ್ಧಾಂತದ ಸಂಸ್ಕಾರಗಳು ಕೇವಲ ಬೋಧನೆಗೆ ಮಾತ್ರ ಸೀಮಿತವಾಗಿರಬಾರದು. ಅವು ನಿತ್ಯವೂ ಆಚರಣೆಯಲ್ಲಿ ಬಂದಾಗ ಬದುಕಿನ ಜಡತ್ವ ನಿವಾರಣೆಯಾಗುತ್ತದೆ. ವಿಭಿನ್ನ ನೆಲೆಯ ಧರ್ಮ ಸಂಸ್ಕಾರದಿಂದ ಮನುಕುಲಕ್ಕೆ ಸಾಂಸತಿಕ ಚೈತನ್ಯ ಪ್ರಾಪ್ತವಾಗುತ್ತದೆ ಎಂದು ಕಲಟಗಿ ಹನ್ನೆರಡುಮಠದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಅಮ್ಮಿನಬಾವಿ ಗ್ರಾಮದ ಸಂಸ್ಥಾನ ಪಂಚಗೃಹ ಹಿರೇಮಠದ ಪ್ರಥಮ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿರುವ ಮಹಾದಾಸೋಹಿ ಶ್ರೀ ಕಲಬುಗಿರ್ ಶರಣಬಸವೇಶ್ವರರ ಪುರಾಣ ಪ್ರವಚನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಾವೇರಿ ಜಿಲ್ಲೆ ನೆಗಳೂರು ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಠಗಳು ಸಮಾಜಕ್ಕೆ ಸ್ಫೂತಿರ್ ತುಂಬುವ ಶಕ್ತಿ ಕೇಂದ್ರಗಳು. ಅರಮನೆಗಳು ನಶಿಸಿವೆ. ಆದರೆ ಗುರು ಮನೆಗಳು ಶಾಶ್ವತವಾಗಿವೆ. ಸುಮಾರು ಸಾವಿರ ವರ್ಷಗಳಿಂದ ಧರ್ಮ ಜಾಗೃತಿಯಲ್ಲಿ ತೊಡಗಿರುವ ಪಂಚಗೃಹ ಹಿರೇಮಠ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂದರು.
ಡಾ. ಆನಂದ ಸ್ವಾಮೀಜಿ ಮಾತನಾಡಿ, ಮಠಗಳ ಸಂಪರ್ಕದಿಂದ ಲಭಿಸುವ ಆಧ್ಯಾತ್ಮದ ಅನುಸಂಧಾನವು ಬದುಕಿನ ಸಂಕೀರ್ಣತೆ, ದ್ವಂದ್ವ&ವೈರುಧ್ಯಗಳ ಬಹುಮುಖ ಒತ್ತಡ ನಿವಾರಣೆ ಮಾಡಿ ಮುಕ್ತತೆ ತುಂಬುತ್ತದೆ. ತನ್ಮೂಲಕ ಮನುಷ್ಯ ಮುಕ್ತಿಯ ಮೆಟ್ಟಿಲೇರಿ ಬಯಲ ಬೆಳಗನ್ನು ಕಾಣಲು ಸಾಧ್ಯ ಎಂದರು.
ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ವೀರಶೈವ ಧರ್ಮದ ಅಷ್ಟಾವರಣವೇ ಅಂಗವಾಗಿ, ಪಂಚಾಚಾರವೇ ಪ್ರಾಣವಾಗಿ, ಷಟ್​ಸ್ಥಲವೇ ಆತ್ಮವಾಗಿಸಿಕೊಂಡಿದ್ದ ಕಲಬುಗಿರ್ಯ ಶ್ರೀ ಶರಣಬಸವೇಶ್ವರರು ನಿರಂತರವಾಗಿ ಕಾಯಕ, ದಾಸೋಹ ಮತ್ತು ಇಷ್ಟಲಿಂಗಾರ್ಚನೆಗಳ ಮೂಲಕ ಸಮಾಜಕ್ಕೆ ಧರ್ಮದ ಬೆಳಕನ್ನು ತೋರಿದ ಕೀತಿರ್ಗೆ ಭಾಜನರಾಗಿದ್ದಾರೆ ಎಂದರು.
ಶ್ರೀಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗುರುಮೂತಿರ್ ಯರಗಂಬಳಿಮಠ ಮಾತನಾಡಿದರು. ಬಿ. ಸಿ. ಕೊಳ್ಳಿ, ಪರಮೇಶ್ವರ ಅಕ್ಕಿ, ವಿ.ಬಿ. ಕೆಂಚನಗೌಡ್ರ, ಚಂಬಣ್ಣ ಉಂಡೋಡಿ, ಉಮೇಶ ಶಿರಕೋಳ, ರಾಮಣ್ಣ ಹುಲ್ಲೂರ, ಈಶ್ವರ ಗಡೇಕಾರ, ಈಶ್ವರ ಗಾಳಿಗೌಡರ, ಇತರರು ಇದ್ದರು.
ವಿಜಯಾನಂದ ಇಟಗಿ ಸ್ವಾಗತಿಸಿದರು. ಬಸವರಾಜ ಕುಸುಗಲ್ಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net