ಸಮಾಜ ಸೇವೆ ಅತ್ಯಂತ ಶ್ರೇಷ್ಠ ಕೆಲಸ

7GPB2-Web
ಜೈಂಟ್ಸ್ ಗ್ರೂಪ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಡಾ.ವಿ.ಬಿ.ನಾಯಿಕವಾಡಿ, ಅನ್ನದಾನೇಶ್ವರ ದೇವರು, ಅರುಣ ಪಾಟೀಲ ಇದ್ದರು
Published on

ಘಟಪ್ರಭಾ: ಸಮಾಜ ಸೇವೆ ಅತ್ಯಂತ ಶ್ರೇಷ್ಠ ಕೆಲಸ ಎಂದು ಜೈಂಟ್ಸ್ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಡಾ.ವಿ.ಬಿ.ನಾಯಿಕವಾಡಿ ಹೇಳಿದ್ದಾರೆ.

ಇಲ್ಲಿನ ಮೃತ್ಯುಂಜಯ ಸಭಾಭವನದಲ್ಲಿ ಈಚೆಗೆ ಏರ್ಪಡಿಸಿದ್ದ ಜೈಂಟ್ಸ್ ಗ್ರೂಪ್‌ನ 2020-21ನೇ ಸಾಲಿನ ನೂತನ ಪದಗ್ರಹಣ ಮತ್ತು ಅಧಿಕಾರ ಹಸ್ತಾಂತರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು.

ನೂತನ ಅಧ್ಯಕ್ಷರಾಗಿ ನಿವೃತ್ತ ಪ್ರಾಚಾರ್ಯ ಕೆ.ಡಿ.ವಾಲಿಕರ ಹಾಗೂ ಆಡಳಿತ ನಿರ್ದೇಶಕರಾಗಿ ಸುಭಾಸ ದಡ್ಡಿಕರ, ಉಪಾಧ್ಯಕ್ಷರಾಗಿ ಶ್ರೀಕಾಂತ ಕುಲಕರ್ಣಿ, ಎಸ್.ಎಚ್.ಗಿರೆಡ್ಡಿ, ಖಜಾಂಚಿಯಾಗಿ ಎಂ.ಬಿ. ದೊಡ್ಡಬಸಣ್ಣವರ, ನಿರ್ದೇಶಕರಾಗಿ ಬಿ.ಎ.ಖೇಮಲಾಪುರೆ, ಎ.ಎಸ್.ದೇಶಪಾಂಡೆ, ಎಸ್.ವಿ.ಮಹಾಜನ, ವಿ.ಆರ್.ಹುಕ್ಕೇರಿ, ಕೆ.ಪಿ. ಕಳ್ಳಿಮಠ ಅಧಿಕಾರ ಸ್ವೀಕರಿಸಿದರು. ಎಸ್.ಎಸ್‌ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳಾದ ಶೃತಿ ಪಾಟೀಲ, ಜರೀನಾ ಸರಕಾವಸ, ಮಹಾಲಕ್ಷ್ಮೀ ದೊಡಮನಿ ಅವರನ್ನು ಸತ್ಕರಿಸಲಾಯಿತು. ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಅನ್ನದಾನೇಶ್ವರ ದೇವರು ಸಾನ್ನಿಧ್ಯ ವಹಿಸಿದ್ದರು. ಅರುಣ ಪಾಟೀಲ, ಲಗಮಣ್ಣ ದೊಡಮನಿ ಇದ್ದರು. ಉಮಾ ದೊಡಮನಿ ನಿರೂಪಿಸಿದರು. ಸುಭಾಸ ದಡ್ಡಿಕರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net