ಸಮಾಜಸೇವೆಯಿಂದ ಬದುಕು ಸಾರ್ಥಕ

kls rotresy
ಕಳಸ ರೋಟರಿ ಸಂಸ್ಥೆಯ ಶತಾಬ್ಧಿ ಭವನದ ಭೋಜನ ಶಾಲೆ ಮತ್ತು ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಜೆಇಎಂ ಶಾಲೆ ಶಿಕ್ಷಕ ಪ್ರಶಾಂತ್ ಅವರನ್ನು ಸನ್ಮಾನಿಸಲಾಯಿತು. ಜಿ.ಭೀಮೇಶ್ವರ ಜೋಷಿ, ಬಿ.ಸಿ.ಗೀತಾ,ಸಾವಿತ್ರಿ ಜಿ. ಜೋಷಿ, ಣೀಶ್ ಇತರರಿದ್ದರು.
Published on

ಕಳಸ: ಸಮಾಜ ಸೇವೆ ಮೂಲಕ ನಮ್ಮ ಇರುವಿಕೆ ಗುರುತು ಬಿಟ್ಟು ಹೋಗಬೇಕು. ಆಗ ನಮ್ಮ ಬದುಕಿನ ಸಾರ್ಥಕತೆ ಕಾಣಲು ಸಾಧ್ಯ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಹೇಳಿದರು.

ಗುರುವಾರ ಕಳಸ ರೋಟರಿ ಶತಾಬ್ಧಿ ಭವನದ ಭೋಜನ ಶಾಲೆ, ಸಭಾಂಗಣ ಕಟ್ಟಡ ಉದ್ಘಾಟನೆ ಮತ್ತು ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಇನ್ನೊಬ್ಬರಿಗೆ ಅನುಕೂಲವಾಗುವಂತೆ ಬದುಕಬೇಕು. ಇದರಿಂದ ನೆಮ್ಮದಿ ಕಾಣಬಹುದು.ನಮ್ಮ ಹೆಜ್ಜೆ ಪಕ್ಕದಲ್ಲಿ ಬೇರೊಬ್ಬರು ಹೆಜ್ಜೆ ಇಡುವಂತೆ ಮಾಡುವಂಥದ್ದು ನಾಯಕತ್ವದ ಗುಣ. ಇದೆಲ್ಲವನ್ನೂ ರೋಟರಿ ಸಂಸ್ಥೆಯಿಂದ ಕಲಿಯಬಹುದು ಎಂದು ಹೇಳಿದರು.
ಕಳಸ ಜೆಇಎಂ ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕ ಎಚ್.ಆರ್.ಪ್ರಶಾಂತ್ ಅವರನ್ನು ಗೌರವಿಸಲಾಯಿತು. ರೋಟರಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ, ಕಳಸ ರೋಟರಿ ಕ್ಲಬ್ ಅಧ್ಯಕ್ಷೆ ಸಾವಿತ್ರಿ ಜಿ. ಜೋಷಿ, ಕಾರ್ಯದರ್ಶಿ ಣೀಶ್, ದಾನಿ ಟಿ.ಎಸ್.ಜಗದೀಶ್ ಹೆಗ್ಡೆ, ಝೋನಲ್ ಲೆಫ್ಟಿನೆಂಟ್ ಕಿರಣ್ ಶೆಟ್ಟಿ, ರೋಟರಿಗಳಾದ ರಾಜಗೋಪಾಲ ಜೋಷಿ, ರಾಜಲಕ್ಷ್ಮೀ ಜೋಷಿ, ಗಿರಿಜಾ ಶಂಕರ್ ಜೋಷಿ, ಬಾಲಕೃಷ್ಣ ಭಟ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net