ಸಮಾಜ ಸೇವೆಯಿಂದ ಬದುಕು ಸಾರ್ಥಕ

1sor4
ಸೊರಬ ಲಯನ್ಸ್ ಕ್ಲಬ್‌ನ ೫೧ನೇ ಸಂಸ್ಥಾಪನಾ ದಿನಾಚರಣೆ ಪ್ರಥಮ ವಲಯ ಸಮಾರಂಭದಲ್ಲಿ ಮಾಜಿ ಜಿಲ್ಲಾ ಗೌರ್ನರ್ ಡಾ. ಎಂ.ಕೆ.ಭಟ್ ನೂತನ ಸದಸ್ಯರಿಗೆ ಪ್ರತಿಜ್ಞಾವಿಽ ಬೋಽಸಿದರು. ಎಚ್.ಎಸ್.ಮಂಜಪ್ಪ, ಡಿ.ಎಚ್.ಕುಮಾರಸ್ವಾಮಿ, ದಿನಕರ್ ಭಾವೆ, ಶಿವಯೋಗಿ ಇತರರಿದ್ದರು.
Published on

ಸೊರಬ: ಅರ್ಹರಿಗೆ ಸಹಾಯ ಮಾಡುವುದರಿಂದ ನಮ್ಮ ಋಣವನ್ನು ಸ್ವಲ್ಪಮಟ್ಟಿಗಾದರೂ ತೀರಿಸಲು ಸಾಧ್ಯ ಎಂದು ಲಯನ್ಸ್ ಜಿಲ್ಲೆ 317 ಸಿ ಪ್ರಾಂತ್ಯ 7 ವಲಯ 3ರ ವಲಯಾಧ್ಯಕ್ಷ ಕೆ.ಶಿವಾನಂದ್ ಹೇಳಿದರು. ಶನಿವಾರ ರಾತ್ರಿ ಸೊರಬ ಲಯನ್ಸ್ ಕ್ಲಬ್‌ನ ೫೧ನೇ ಸಂಸ್ಥಾಪನಾ ದಿನಾಚರಣೆಯ ಪ್ರಥಮ ವಲಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಸಮಾಜಕ್ಕೆ ಹಸಿವು ನಿವಾರಣೆ, ಉಚಿತ ಕಣ್ಣಿನ ತಪಾಸಣೆ, ನೇತ್ರದಾನಕ್ಕೆ, ಅಂಧತ್ವ ನಿವಾರಣೆ ಜತಗೆ ನಮ್ಮಿಂದಾಗುವ ಸೇವೆಯನ್ನು ಮಾಡುವುದಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಬೇಕು. ಅದರಿಂದ ಸಂಸ್ಥೆಗೆ ಉತ್ತಮ ಹೆಸರು ತರಲು ಸಾಧ್ಯ ಎಂದರು. ಮಾಜಿ ಜಿಲ್ಲಾ ಗೌರ್ನರ್ ಡಾ. ಎಂ.ಕೆ.ಭಟ್ ನೂತನ ಸದಸ್ಯರಿಗೆ ಪ್ರತಿಜ್ಞಾವಿಽ ಬೋಽಸಿದರು. ಸಂಸ್ಥಾಪಕ ಸದಸ್ಯ ಮಾಜಿ ಜಿಲ್ಲಾ ಗೌರ್ನರ್ ಎಚ್.ಎಸ್.ಮಂಜಪ್ಪ ಅವರನ್ನು ಸನ್ಮಾನಿಸಲಾಯಿತು. ಡಿ.ಎಚ್.ಕುಮಾರಸ್ವಾಮಿ, ಕಾರ್ಯದರ್ಶಿ ಎಸ್.ಕೃಷ್ಣಾನಂದ, ಎಚ್.ಎಂ.ಪ್ರಶಾAತ, ಟಿ.ಆರ್.ಸುರೇಶ್, ಶಿವಯೋಗಿ, ಎಂ.ಆರ್.ಗಿರೀಶ್, ಸಿದ್ದೇಶ, ಅರುಣ ಉಳವಿ, ದಿನಕರ ಭಾವೆ, ಅಮೃತರಾಜ್, ಪ್ರತಿಮಾ, ಸವಿತಾ ಭಟ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net