

ನರೇಗಲ್ಲ: ಸಮಾಜಕ್ಕೆ ಯಾವುದಾರೂ ಒಂದು ರೂಪದಲ್ಲಿ ಸೇವೆ ನೀಡಬೇಕಾಗಿರುವುದು ಪ್ರತಿಯೊಬ್ಬ ಮಾನವನ ಕರ್ತವ್ಯ ಎಂದು ಹಾಲಕೆರೆ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ಸಮೀಪದ ಅಬ್ಬಿಗೇರಿ ಗ್ರಾಮದ ಶ್ರೀರೇಣುಕಾಚಾರ್ಯ ಸಾಂಸ್ಕೃತಿಕ ಸಭಾ ಭವನದಲ್ಲಿ ಪ್ರವಣ ಪ್ರಕಾಶನ, ಧಾರವಾಡ ಹಾಗೂ ತರುಣ ಸಂಘ ಮತ್ತು ಡಾ. ಆರ್.ಬಿ. ಬಸವರಡ್ಡೇರ ಅಭಿಮಾನಿ ಬಳಗ ಆಶ್ರಯದಲ್ಲಿ ಭಾನುವಾರ ಅನನ್ಯ ಅಭಿನಂದನಾ ಗ್ರಂಥ ಲೋಕಾರ್ಪಣೆ, ತೊಂಬತ್ತನೆಯ ವರ್ಧಂತಿ ಮತ್ತು ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಅಬ್ಬಿಗೇರಿಯ ಡಾ. ಆರ್.ಬಿ. ಬಸವರಡ್ಡೇರ ಅವರು ವೈದ್ಯಕೀಯ ಸೇವೆಯ ಜತೆಗೆ ರಾಜಕೀಯ, ಸಾಮಾಜಿಕ ಮತ್ತು ಸಂಘ ಸಂಸ್ಥೆಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತ ಯುವಕರಗೆ ಮಾದರಿಯಾಗಿದ್ದಾರೆ. ಅವರು ಅಬ್ಬಿಗೇರಿಯ ಆಲದ ಮರ ಇದ್ದಂತೆ ಎಂದು ಬಣ್ಣಿಸಿದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ವ್ಯಕ್ತಿ ಸಮಾಜದಲ್ಲಿ ಸರಳವಾಗಿದ್ದರೂ, ಸೇವೆಯಲ್ಲಿ ಅನನ್ಯವಾಗಿರಬೇಕು. ಬಸವರಡ್ಡೇರ ಅವರು ಜಿಪಂ ಸದಸ್ಯರಾಗಿದ್ದ ಅವಧಿಯಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.
90 ವಹೋಮಾನದ ಪಾಲಾಕ್ಷಯ್ಯ ಶಾಸ್ತ್ರಿ ಅರಳೆಲೆಮಠ, ಚನ್ನಮ್ಮ ಹರದಾರಿ, ಸಿಎ ಪದವಿ ಪಡೆದ ವಿಕಾಸ ತಿಪ್ಪಶೆಟ್ಟಿ, ವೀರೇಶ ಪಸಾರದ, ಪಿಎಚ್‌ಡಿ ಪದವಿ ಪಡೆದ ಶರಣಪ್ಪ ತಿಪ್ಪಶೆಟ್ಟಿ, ನಿವೃತ್ತ ಯೋಧರಾದ ಗುರುಪಾದಗೌಡ ಪಾಟೀಲ, ಮಾರುತಿ ಬಂಡಿವಡ್ಡರ, ಅಂದಾನಗೌಡ ಮುದಿಗೌಡ್ರ, ಶರಣಪ್ಪ ಹುಳ್ಳಿಯವರ, ಆನಂದ ಹಳ್ಳಿ, ವಿರುಪಾಕ್ಷಪ್ಪ ರಾಮೇನಹಳ್ಳಿ, ಮಲ್ಲಿಕಾರ್ಜುನ ತಾಳಿಕೋಟಿ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ಸೌಮ್ಯ ಬಸವರಡ್ಡೇರ, ಭಾಗ್ಯ ಐಹೋಳಿ, ಸಂಜನಾ ನಿರಲೋಟಿ, ಲಕ್ಷ್ಮೀ ನಿರಲೋಟಿ, ಸಿಂಚನಾ ವೀರಾಪೂರ, ಸಾವಿತ್ರಿ ತಲ್ಲೂರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿದರು. ರೋಣ ಗುಲಗಂಜಿಮಠದ ಗುರುಪಾದ ಸ್ವಾಮೀಜಿ ಆಶೀರ್ವಚನ ನೀಡಿದರು. ಕೊಡಗಾನೂರ ಚಂದ್ರಶೇಖರ ಸ್ವಾಮೀಜಿ, ಮುಗಳಖೋಡ ಶಾಖಾಮಠದ ಬಸವರಾಜ ಶರಣರು ಸಮ್ಮುಖ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ಬಿ.ಎಫ್. ಚೇಗರಡ್ಡಿ, ಬಸಯ್ಯ ಶಿರೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ಬಿ.ಆರ್. ಯಾವಗಲ್ಲ, ಡಾ. ಬಿ.ವಿ. ಶಿರೂರ, ಗ್ರಾಪಂ ಅಧ್ಯಕ್ಷೆ ಲಲಿತಾ ರಾಠೋಡ, ಉಪಾಧ್ಯಕ್ಷೆ ಜ್ಯೋತಿ ತೆಗ್ಗಿನಕೇರಿ, ಐ.ಎಸ್. ಪಾಟೀಲ, ಮಹೇಶ ತಿಪ್ಪಶೆಟಿ ಇತರರಿದ್ದರು. ಅಂದಪ್ಪ ವೀರಾಪೂರ ನಿರೂಪಿಸಿದರು. ಬಸವರಾಜ ಪಲ್ಲೇದ ವಂದಿಸಿದರು.
ವಿಜಯವಾಣಿ ಚಿತ್ರ
ಫೋಟೋ ಶಿರ್ಷಿಕೆ 30ಎನ್‌ಆರ್‌ಜಿಎಲ್2) ಅಬ್ಬಿಗೇರಿ ಗ್ರಾಮದಲ್ಲಿ ಅನನ್ಯ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಲಾಯಿತು. ಮುಪ್ಪಿನ ಬಸವಲಿಂಗ ಸ್ವಾಮೀಜಿ, ಗುರುಪಾದ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ಬಸವರಾಜ ಶರಣರು, ಡಾ. ಆರ್.ಬಿ. ಬಸವರಡ್ಡೇರ, ಜಿ.ಎಸ್. ಪಾಟೀಲ, ಬಿ.ಆರ್. ಯಾವಗಲ್ಲ, ಐ.ಎಸ್. ಪಾಟೀಲ, ಡಿ.ಆರ್. ಪಾಟೀಲ ಇತರರು ಇದ್ದರು.