

ಸರಗೂರು: ತಾಲೂಕಿನಲ್ಲಿ ಯುವಕರು ಸೇರಿ ನಾಮಧಾರಿಗೌಡ ಸಂಘ ರಚಿಸಿಕೊಂಡು ಸಮುದಾಯದ ಸಂಘಟನೆ, ಸಮಾಜ ಸೇವೆ ಮಾಡಿತ್ತಿರುವುದು ಶ್ಲಾಘನೀಯ ಎಂದು ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಕೃಷ್ಣಯ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಅಖಿಲ ನಾಮಧಾರಿಗೌಡ ಸಮುದಾಯದ ಭವನದಲ್ಲಿ ಭಾನುವಾರ ಆಯೋಜಿಸಿದ್ದ ನಾಮಧಾರಿಗೌಡ ಯುವಕರ ಸಂಘದ 15ನೇ ವಾರ್ಷಿಕ ಮಹಾಸಭೆ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ ಮಾತ್ರ ಸಭೆ ಸಮಾರಂಭಗಳು ನಡೆಯುತ್ತವೆ. ಅದರೆ ಬೇರೆ ತಾಲೂಕಿನಲ್ಲಿ ನಾಮಧಾರಿಗೌಡರ ಸಭೆ ನಡೆಯುತ್ತಿಲ್ಲ. ಮುಂದಿನ ಸಭೆಗಳಿಗೆ ಬೇರೆ ತಾಲೂಕಿನಿಂದ ನಮ್ಮ ಸಮಾಜದವರು ಆಹ್ವಾನಿಸಬೇಕು ಎಂದು ಸಲಹೆ ನೀಡಿದರು.
ಹಿರಿಯ ಪತ್ರಕರ್ತ ಸುಬ್ರಹ್ಮಣ್ಯ ಮಾತನಾಡಿದರು. ಸಂಘದ ಅಧ್ಯಕ್ಷ ಭರತ್ ಚಾಮರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳ ಪ್ರತಿಭಾ ಪುರಸ್ಕರಿಸಲಾಯಿತು.
ಅಖಿಲ ನಾಮಧಾರಿಗೌಡ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ಅಧ್ಯಕ್ಷ ಭೀಮರಾಜ್, ಮುಖಂಡರಾದ ನಾಗೇಂದ್ರ, ರಾಘವೇಂದ್ರ, ಮುರಳಿ, ಆಮಿತ್ ಕುಮಾರ್, ಆನಂದ್, ಸುಬ್ರಹ್ಮಣ್ಯ, ಮಾರುತಿ, ವೇಣುಗೋಪಾಲ್, ಸತ್ಯನಾರಾಯಣ, ಸತೀಶ್ ಗುಜ್ಜಪ್ಪನ ಹುಂಡಿ, ಚರಣ್, ಪದ್ಮರಾಜ್, ನಾಗೇಶ್, ಪ್ರಸನ್ನ, ಪ್ರಶಾಂತ್, ಮಹೇಶ, ಪ್ರಕಾಶ, ಚೇತನ್, ಪುನೀತ್ ಕೆ.ಜಿ.ಹಳ್ಳಿ, ಮಧು ಮೂರ್ತಿ, ಪಾರ್ಶ್ವನಾಥ್, ಪುನೀತ್‌ಕುಮಾರ್ ಇತರರು ಇದ್ದರು.