ರೋಟರಿ ಕ್ಲಬ್​ನಿಂದ ಸಮಾಜಸೇವೆ

29 NRD 4 NEW
Published on

ನರಗುಂದ: ಸಮಾಜ ಸೇವೆಯನ್ನೇ ಮುಖ್ಯಗುರಿ ಯನ್ನಾಗಿಸಿ ಕೊಂಡಿರುವ ರೋಟರಿ ಕ್ಲಬ್ ರಕ್ತದಾನ, ಕೃಷಿ, ಹಲವಾರು ಬಡಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಶ್ರಮಿಸುತ್ತಿದೆ ಎಂದು ರೋಟರಿ ಕ್ಲಬ್ ಸಹಾಯಕ ಜಿಲ್ಲಾ ಗವರ್ನರ್ ಡಾ. ಮಹಿಮ ದಂಡ ಹೇಳಿದರು.

ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ನರಗುಂದ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಜಿ.ವಿ. ಹೊಂಗಲ ಮಾತನಾಡಿದರು. ರೋಟರಿ ಕ್ಲಬ್ ಜಿಲ್ಲಾ ಕಾರ್ಯದರ್ಶಿ ಅಶೋಕ ನಾಯ್ಕ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳಿಗೆ ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು. ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಪ್ರವೀಣ ಆನೇಗುಂದಿ ಅಧಿಕಾರ ಹಸ್ತಾಂತರಿಸಿದರು. ನರಗುಂದ ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಪ್ರಕಾಶ ಹಸಬಿ, ಕಾರ್ಯದರ್ಶಿ ವೀರೇಂದ್ರ ಪಾಟೀಲ, ಇನ್ನರ್​ವ್ಹಿಲ್ ಕ್ಲಬ್ ಅಧ್ಯಕ್ಷೆಯಾಗಿ ಸುಜಾತಾ ಪಾಟೀಲ, ಕಾರ್ಯದರ್ಶಿ ಮಧು ವಿ. ಪಾಟೀಲ, ಉಪಾಧ್ಯಕ್ಷೆ ಡಾ.ರೇಣುಕಾ ಅಸೂಟಿ, ಖಜಾಂಚಿ ಬಿ.ಎಂ. ಗೊಜನೂರ, ಎಲ್.ಬಿ. ಹೊಸಮನಿ, ವಾಸಣ್ಣ ಬೋನಗೇರಿ, ಸಂತೋಷ ಆನೇಗುಂದಿ, ಅಶೋಕ ಗುಜಮಾಗಡಿ, ಮಂಜುನಾಥ ಆನೇಗುಂದಿ, ಶೀತಲ್ ರೋಖಡೆ ಮತ್ತು ಇನ್ನರ್​ವ್ಹಿಲ್ ಕ್ಲಬ್​ನ ನೂತನ ಪದಾಧಿಕಾರಿಗಳಾಗಿ ಪುಷ್ಟಾ ಶೆಟ್ಟಿಕೇರಿ, ಸಂಗೀತಾ ಆನೇಗುಂದಿ, ವಿದ್ಯಾ ಕಾಳಗಿ, ಶಾಲಿನಿ ಕುಲಕರ್ಣಿ, ಶಾಹೀದಾ ಹುಯಿಲಗೋಳ, ಅನಿತಾ ಗುಡಿಸಾಗರ, ಸೌಭಾಗ್ಯಾ ಕುಷ್ಟಗಿ, ರುಬೀಯಾ ಮೇಲಗಮನಿ, ಶೈಲಾ ಗೋವೇಶ್ವರ, ಶೀಲಾ ಹೊಂಗಲ, ತನುಜಾ ರೋಖಡೆ, ರಾಧಾ ಯಲ್ಕರ್ ಪ್ರಮಾಣ ವಚನ ಸ್ವೀಕರಿಸಿದರು. ಮಲ್ಲವ್ವ ಅಂಗಡಿ, ಲಕ್ಷ್ಮವ್ವ ತಳವಾರ ಅವರಿಗೆ ಹೊಲಿಗೆ ಯಂತ್ರ, ರೋಟರಿ ಶಾಲಾ ಶಿಕ್ಷಕಿಯರಿಗೆ ಸೀರೆ, ರವಿಕೆ, ವಾಹನ ಚಾಲಕರಿಗೆ ಉಚಿತ ಸಮವಸ್ತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ನೃತ್ಯ ರೂಪಕಗಳನ್ನು ಪ್ರದರ್ಶಿಸಲಾಯಿತು.

ಸಲೀಮ ಮೇಗಲಮನಿ, ರವಿ ಹೊಂಗಲ, ವೆಂಕಣ್ಣ ಗುಜಮಾಗಡಿ, ಬಿ.ಎಸ್. ಶೆಟ್ಟಿಕೇರಿ, ಎಸ್.ವಿ. ಕಾಳಗಿ, ಡಾ.ಸಿ.ಎಸ್. ಅಸೂಟಿ, ಡಾ.ಎ.ಐ. ಹುಯಿಲಗೋಳ, ಬಿ.ಎಸ್. ಅಂಗಡಿ, ಎ.ಆರ್. ಗೊವೇಶ್ವರ, ಸುನೀಲ ಕುಷ್ಟಗಿ, ಚಂದ್ರಗೌಡ ಪಾಟೀಲ, ಎಸ್.ಎಲ್. ಕುಲಕರ್ಣಿ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net