ಸಮಾಜಸೇವೆಯಿಂದ ಮನಸ್ಸಿಗೆ ಹರ್ಷ

FotoJet
Published on

ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಜೆಡಿಎಸ್​ ಮುಖಂಡ ಆರ್​.ಉಗ್ರೇಶ್​ ಹೇಳಿಕೆ

ಶಿರಾ: ಗ್ರಾಮೀಣ ಪ್ರದೇಶದ ಬಡ ಕುಟುಂಬಗಳ ವೃದ್ಧ ತಂದೆ, ತಾಯಿಯರಿಗೆ ದೃಷ್ಟಿಯ ನವ ಚೈತನ್ಯ ನೀಡಬೇಕು, ಹಿರಿಯರ ಆಶೀರ್ವಾದವೇ ನಮಗೆ ಶ್ರೇಯಸ್ಸು ಎಂಬ ಸಂಕಲ್ಪದೊಂದಿಗೆ ಉಚಿತ ಕಣ್ಣಿನ ಶಸಚಿಕಿತ್ಸೆ ಮಾಡಿಸಲಾಗುತ್ತಿದೆ. ಸಮಾಜಮುಖಿ ಚಿಂತನೆಯ ಈ ಸೇವೆಗಳಿಂದ ಮನಸ್ಸಿಗೆ ಹರ್ಷ ಉಂಟಾಗುತ್ತದೆ ಎಂದು ಜೆಡಿಎಸ್​ ಹಿರಿಯ ಮುಖಂಡ ಆರ್​.ಉಗ್ರೇಶ್​ ಹೇಳಿದರು.

ತಾಲೂಕಿನ ಕಳ್ಳಂಬೆಳ್ಳ ಹೋಬಳಿ ಸೀಬಿ ಗ್ರಾಮದಲ್ಲಿ ಲಯನ್ಸ್​ ಕ್ಲಬ್​, ವೈಷ್ಣವಿ ಲಯನ್​ ಸಂಸ್ಥೆ ಸೆಂಟರ್​ ಮತ್ತು ಆರ್​.ಉಗ್ರೇಶ್​ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ ಮತ್ತು ಶಸಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿ, ಶಿರಾ ವಿಧಾನಸಭಾ ೇತ್ರ ವ್ಯಾಪ್ತಿಯ 500 ಜನರಿಗೆ ಉಚಿತ ಕಣ್ಣಿನ ಶಸಚಿಕಿತ್ಸೆ ಮಾಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಸಾವಿರ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸುವ ಗುರಿ ಹೊಂದಲಾಗಿದೆ ಎಂದರು.

ಸೀಬಿ ಗ್ರಾಪಂ ಮಾಜಿ ಅಧ್ಯ ಹುಂಜುನಾಳ ರಾಜಣ್ಣ ಮಾತನಾಡಿ, ಸಾಮಾಜಿಕ ಕಳಕಳಿಯಿಂದ ಗ್ರಾಮೀಣ ಜನರಿಗೆ ಉಚಿತ ಕಣ್ಣಿನ ಶಸಚಿಕಿತ್ಸೆ ಮಾಡಿಸುತ್ತಿರುವುದು ಶ್ಲಾನೀಯ. ಈ ರೀತಿಯ ಸೇವೆಗಳಿಂದ ಜನರ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ ಎಂದರು.

ಸೀಬಿ ಗ್ರಾಪಂ ಅಧ್ಯ ಕೆಂಪಯ್ಯ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂದ ಅಧ್ಯೆ ಅನುಸೂಯ ಗುರುರಾಜ್​, ಉಪಾಧ್ಯ ಮಲ್ಲಿಕಾರ್ಜುನಯ್ಯ, ಸದಸ್ಯ ಶಶಿಕುಮಾರ್​, ನಿವೃತ್ತ ಎಇಇ ಷಣ್ಮುಖಪ್ಪ, ಗ್ರಾಪಂ ಮಾಜಿ ಅಧ್ಯ ಶಿವಣ್ಣ, ನಿಸರ್ಗ ಸುರೇಶ್​, ಮುಖಂಡರಾದ ಪರಮೇಶ್​, ದೊಡ್ಡ ಮುದ್ದಯ್ಯ, ದೊರೆಗೌಡ, ಪುಟ್ಟರಾಜು, ರಾಮಣ್ಣ ಸೀಬಿ ಅಗ್ರಹಾರ, ಮಂಜಣ್ಣ, ರಾಮಣ್ಣ ಮತ್ತು ಆರ್​.ಉಗ್ರೇಶ್​ ಅಭಿಮಾನಿ ಬಳಗದ ಪದಾಧಿಕಾರಿಗಳಾದ ಮೆಡಿಕಲ್​ ನಾಗಣ್ಣ, ಯಶಸ್ವಿನಿ, ಮಂಜುನಾಥ್​, ವನಿತಾ, ಕೆ.ಸಿ.ಆರ್​ ಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net