

ಪಿರಿಯಾಪಟ್ಟಣ: ನಿಜವಾದ ಸಂತೋಷ ನೆಮ್ಮದಿ ಹುಡುಕುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಆದರೆ ಕೆಲವರಿಗೆ ಸಮಾಜ ಸೇವೆಯಿಂದಲೇ ಸಂತೋಷ, ನೆಮ್ಮದಿ ದೊರಕುತ್ತದೆ ಎಂಬುದು ತಿಳಿದಿಲ್ಲ ಎಂದು ಲಯನ್ಸ್ ಸಂಸ್ಥೆ ಮಾಜಿ ಜಿಲ್ಲಾ ಪ್ರಾಂತಪಾಲ ವಸಂತ್ ಶೆಟ್ಟಿ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಪಿರಿಯಾಪಟ್ಟಣ ಲಯನ್ಸ್ ಸಂಸ್ಥೆಯ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಹಸ್ತಾಂತರಿಸಿದ ಮಾತನಾಡಿ, ದೇವರು ನಮಗೆ ಅಶಕ್ತರ ಸೇವೆ ಮಾಡುವ ಅವಕಾಶ ಕಲ್ಪಿಸಿದ್ದಾನೆ. ಅದನ್ನು ಲಯನ್ಸ್ ಸಂಸ್ಥೆಯ ಮೂಲಕ ಮಾಡಿ ಇತರರಿಗೆ ಮಾದರಿಯಾಗಬೇಕಿದೆ ಎಂದರು.
ಯಾರು ತಮ್ಮ ಅಧಿಕಾರದ ಅವಧಿಯಲ್ಲಿ ಹೆಚ್ಚಿನ ಸಮಾಜ ಸೇವೆಯ ಕಾರ್ಯ ಮಾಡಿದಲ್ಲಿ ಅದರ ಕ್ರೆಡಿಟ್ ಇತರ ಎಲ್ಲ ಸದಸ್ಯರಿಗೂ ಸಿಗಲಿದೆ. ಇತರ ಸದಸ್ಯರ ಸಹಕಾರದಿಂದ ಮಾತ್ರ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿನಿಗೆ ಚಿಕಿತ್ಸಾ ವೆಚ್ಚಕ್ಕೆ ಪಿರಿಯಾಪಟ್ಟಣ ಲಯನ್ಸ್ ಸಂಸ್ಥೆ ವತಿಯಿಂದ 10 ರೂ. ಸಾವಿರ ದೇಣಿಗೆ ನೀಡಲಾಯಿತು.
ಲಯನ್ಸ್ ಜಿಲ್ಲಾ ಪದಾಧಿಕಾರಿಗಳಾದ ಕೆ.ಎ.ಮಹದೇವಪ್ಪ. ಬೊಳ್ಳಪ್ಪ, ಕನ್ನಿಕಾ, ಸುಮಂತ್, ನೂತನ ಅಧ್ಯಕ್ಷ ಕುಮಾರ್, ಕಾರ್ಯದರ್ಶಿ ಗಿರೀಶ್ ಮಾತನಾಡಿದರು. ನೂತನ ಪದಾಧಿಕಾರಿಗಳಾದ ಮಂಜುನಾಥ್ ಸಿಂಗ್, ಪಿ.ಕೆ.ವಿಜಯಕುಮಾರ್, ವಿನೋದ್ ಕುಮಾರ್, ದೀಪ, ದಾಕ್ಷಾಯಣಿ, ಸವಿತಾ, ಪೂನಂ, ಆನಂದ್‌ಕುಮಾರ್, ಚೈತ್ರಾ, ದೊಡ್ಡೇಗೌಡ ಹಾಜರಿದ್ದರು.