ಸಾಮಾಜಿಕ ಕ್ರಾಂತಿಕಾರಿ ಬ್ರಹ್ಮಶ್ರೀ ನಾರಾಯಣಗುರು

bnk narayana
ಬಣಕಲ್‌ನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಮತ್ತು ಓಣಂ ಹಬ್ಬ ಆಚರಿಸಲಾಯಿತು. ಮಲಯಾಳಿ ಸಂಘದ ಅಧ್ಯಕ್ಷ ರಾಮಚಂದ್ರ, ದಿನೇಶ್, ಬಿ.ಕೆ ಲಕ್ಷ್ಮಣ್ ಇತರರಿದ್ದರು.
Published on

ಬಣಕಲ್: ಬ್ರಹ್ಮಶ್ರೀ ನಾರಾಯಣಗುರುಗಳ ಬೋಧನೆಗಳು ಹಾಗೂ ತತ್ವಾದರ್ಶಗಳು ಮಾನವಕುಲಕ್ಕೆ ಮಾರ್ಗದರ್ಶಿ. ಅವರ ಚಿಂತನೆಗಳು ಎಲ್ಲರ ಮನೆ, ಮನಗಳನ್ನು ತಲುಪಬೇಕಿದೆ ಎಂದು ಬಣಕಲ್‌ನ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಅಧ್ಯಕ್ಷ ರಾಮಚಂದ್ರ ಹೇಳಿದರು.

ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದಿಂದ ಬಣಕಲ್‌ನಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಮತ್ತು ಓಣಂ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ಅನಿಷ್ಟ ಪದ್ಧ್ದತಿಗಳು ತಾಂಡವವಾಡುತ್ತಿದ್ದಾಗ ಅಜ್ಞಾನವನ್ನು ತೊಡೆಯಲು ಶಿಕ್ಷಣದ ಮೂಲಕ ಸಾಮಾಜಿಕ ಕ್ರಾಂತಿಯ ಸಂದೇಶವನ್ನು ಸಾರಿದರು. ಶೋಷಿತ ಮತ್ತು ಹಿಂದುಳಿದ ವರ್ಗಗಳಿಗೆ ಸಾಮಾಜಿಕ ಸಮಾನತೆ ದೊರಕಿಸಿಕೊಟ್ಟವರು ಬ್ರಹ್ಮಶ್ರೀ ನಾರಾಯಣಗುರುಗಳು ಎಂದರು.
ಮಾಜಿ ಸೈನಿಕ ದಿನೇಶ್ ಮಾತನಾಡಿ, ಜಾತಿ ತಾರತಮ್ಯ ಕಡಿಮೆ ಮಾಡಲು ಇಡೀ ಜೀವನ ಮುಡಿಪಾಗಿಟ್ಟವರು ಶ್ರೀ ನಾರಾಯಣಗುರುಗಳು. ಅಸ್ಪಶ್ಯತೆ ಪಿಡುಗಿಗೆ ಅವರದೇ ಆದ ನಿಲುವಿನಲ್ಲಿ ಪರಿಹಾರ ಕಂಡುಕೊಂಡವರು ಎಂದು ಹೇಳಿದರು.
ಓಣಂ ಹಬ್ಬದ ಹಿನ್ನೆಲೆಯಲ್ಲಿ ಹೂವಿನ ರಂಗೋಲಿ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಾಜಿ ಸೈನಿಕರಾದ ದಿನೇಶ್ ಮತ್ತು ಬಿ.ಕೆ ಲಕ್ಷ್ಮಣ್, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಬಣಕಲ್‌ನ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಬಣಕಲ್, ಬಾಳೂರು ಹಿರೇಬೈಲ್ ಭಾಗದ ಪದಾಧಿಕಾರಿಗಳು, ವಸಂತ್ ಹಾರ್‌ಗೋಡು, ಭಕ್ತೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net