

ವಿಜಯಪುರ: ಹನ್ನೇರಡನೇ ಶತಮಾನದಲ್ಲಿ ಉಳ್ಳವರ ಸೊತ್ತಾಗಿದ್ದ ಶಿಕ್ಷಣ, ಜ್ಞ್ಞಾನ, ಉನ್ನತಿಯನ್ನು ಸಮಾಜದ ಎಲ್ಲ ವರ್ಗದವರಿಗೂ ಹಂಚಿದ ಕೀರ್ತಿ ವಚನಕಾರ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಬಿಎಲ್ಡಿಇ ಸಂಸ್ಥೆಯ ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಚಿಂತನ ಬಳಗದ ಸಂಯೋಜಕ, ಜಿಲ್ಲಾ ಉಸ್ತುವಾರಿ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಹೇಳಿದರು.
ನಗರದ ಸಿಕ್ಯಾಬ್ ಸಂಸ್ಥೆ ಮತ್ತು ಅಖಿಲ ಭಾರತ ಶೈಕ್ಷಣಿಕ ಆಂದೋಲನದ ಅಡಿಯಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮ್ಮೇಳನದ ಎರಡನೆಯ ದಿನ ಶನಿವಾರ ಶಾಲಾ ಶಿಕ್ಷಣದ ಸಾರ್ವತ್ರೀಕರಣ ಕುರಿತಾದ ಗೋಷ್ಠಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ವರ್ಗ, ವರ್ಣ, ಲಿಂಗ, ಸಮಾನತೆ ತತ್ವದ ಮೇಲೆ ಬಸವಣ್ಣನವರು ಸಮಾಜದ ಸರ್ವರೂ ಜ್ಞಾನವಂತರಾಗಿ ಬದುಕಬೇಕು. ಶಿಕ್ಷಣದಿಂದಲೇ ಸಮಾಜ ಸುಧಾರಣೆ ಸಾಧ್ಯವೆಂದು ತಿಳಿಸಿದ್ದರು. ಅಲ್ಲದೆ, ಕಾಯಕ, ದಾಸೋಹ ತತ್ವಗಳನ್ನು ಸಾರ್ವತ್ರಿಕರಣಗೊಳಿಸಿ ಸರ್ವರೂ ಮಾನವೀಯ ನೆಲೆಯಲ್ಲಿ ಬದುಕಬೇಕು ಎಂದು ಅವರು ಹೇಳಿದರು.
ಉಪನ್ಯಾಸಕ ವಿಶ್ರಾಂತ ಪ್ರಾಚಾರ್ಯ ಡಾ. ಮಹ್ಮದ ಅಫ್ಜಲ್ ಮುಸ್ಲಿಂರಲ್ಲಿ ಸಾಕ್ಷರತೆ ಹಾಗೂ ಪದವೀಧರರ ಪ್ರಮಾಣ ಕುರಿತು ಮಾತನಾಡಿ, ಸಮುದಾಯದ ಜನರಲ್ಲಿ ಸಾಕ್ಷರತೆ ಪ್ರಮಾಣ ಕಡಿಮೆ ಪ್ರಮಾಣದಲ್ಲಿದೆ. ಪದವಿ ಪಡೆದವರು ಕಡಿಮೆಯಾಗಿದ್ದು, ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಅವರು ತಿಳಿಸಿದರು.
ನಿವೃತ್ತ ಪ್ರಾಚಾರ್ಯ ಡಾ. ರೊಶನ್ ಆರಾ, ಮುಸ್ಲಿಮ್ ಮಹಿಳಾ ಶಿಕ್ಷಣದ ಸ್ಥಿತಿಗತಿಗಳ ಕುರಿತು ಮತ್ತು ಅಲ್&ಅಮೀನ ವೈದ್ಯಕಿಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಮೆಹಬೂಬ ಕಲಬುರ್ಗಿ ಭಾರತದಲ್ಲಿ ಶೈಕ್ಷಣಿಕ ೇತ್ರಕ್ಕೆ ಮುಸ್ಲಿಂರ ಕೊಡುಗೆ ಕುರಿತು ಮಾತನಾಡಿದರು.
ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ. ಅಬ್ದುಲಗಣಿ ಇಮಾರತವಾಲೆ ದಣ ಭಾರತದ ರಾಜಕೀಯ ಇತಿಹಾಸ ಕುರಿತು, ಪೊ. ವಾಜೀದ ಪೀರಜಾದೆ ಶಾಹಿರಾಜಮನೆತನಗಳ ಮೇಲೆ ಸೂಫಿಸಂತರ ಪ್ರಭಾವ ಕುರಿತು ಮತ್ತು ಡಾ. ಮುಸ್ತಾಕ ಅಹ್ಮದ ಇನಾಮದಾರ ಆದಿಶಾಹಿ ಕಾಲದ ಸಾಂಸತಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ಮಾತನಾಡಿದರು.
ಮುಖಂಡ ಅಬ್ದುಲ್ ಹಮೀದ ಮುಶ್ರೀಫ್ ಉಪಸ್ಥಿತರರಿದ್ದರು. ಪಾಲಿಕೆ ಸದಸ್ಯ ಅಶ್ಪಾಕ್ ಮನಗೊಳಿ, ಪೊ. ಮೊಹಿನ ಅಖ್ತರ ಅನ್ಸಾರಿ, ವಕೀಲ ದೆಹಲಿ ಅಸ್ಲಂ ಅಹ್ಮದ, ವಿದ್ಯಾರ್ಥಿ ಉಪನ್ಯಾಸಕ ಅಬುಖಾನ ವೇದಿಕೆಯಲ್ಲಿದ್ದರು. ಗೋಷ್ಠಿಯ ಸಂಯೋಜಕಿ ಪ್ರೊ. ಸೀಮಾ ಇನಾಮದಾರ, ಪ್ರೊ. ಸ್ವಾಲಿಯಾಖಾನ ಲಾಹೋರಿ ನಿರ್ವಹಿಸಿದರು.
ನಂತರ ಉತ್ತರ ಪ್ರದೇಶದ ಖೈರಾನಾದ ಅಲ್&ಖುರಾನ್ ಅಕಾಡೆಮಿ ಮುಪ್ತಿ ಅಥರ ಶಮ್ಸಿ ಹಾಗೂ ತಂಡದವರು ಖುರಾನ್ ತತ್ವ ಸಿದ್ಧಾಂತಗಳ ಕುರಿತು ಆಕರ್ಷಣೀಯವಾದ ರೂಪಕ ಪ್ರದರ್ಶಿಸಿದರು.