

ಬೆಳಗಾವಿ: ಹದಿನಾರನೆಯ ಶತಮಾನದಲ್ಲಿ ಉತ್ತರ ಕರ್ನಾಟಕದ ಹಳ್ಳಿಯ ಕುರುಬ ಸಮುದಾಯದಲ್ಲಿ ಜನಿಸಿದ ದಾಸಶ್ರೇಷ್ಠ ಸಂತ ಕನಕದಾಸರಿಗೆ ಕರ್ನಾಟಕ ಹರಿದಾಸ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವಿದೆ. ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಸಂಗೀತ ಕ್ಷೇತ್ರಗಳಿಗೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಅಂಗಡಿ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ.ಆನಂದ ದೇಶಪಾಂಡೆ ಹೇಳಿದ್ದಾರೆ.
ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನಕದಾಸರ 533ನೇ ಜಯಂತಿ ಆಚರಣೆಯಲ್ಲ್ಲಿ ಮಾತನಾಡಿದ ಅವರು, ಕನಕದಾಸರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಸಂಸ್ಕೃತಿ ಬೆಳೆಸಲು ಶ್ರಮಿಸಬೇಕು ಎಂದರು.
ಪ್ರೊ.ಎಂ.ವಿ. ಕಂಠಿ, ಪ್ರೊ.ಎಸ್.ಪಿ. ದೊಡಮನಿ, ಡಾ.ಕಿರಣ ಪೋತದಾರ, ಪ್ರೊ.ಅರವಿಂದ ಜಾಧವ, ಪ್ರೊ.ನಿಖಿಲ ಚಾಂಗೋಲಿ, ಬ್ರಿಜೇಶ ಪಾಟೀಲ, ಶಂಕರ ಹಿರೇಮಠ, ಪ್ರಸಾದ ಪಂಚಾಕ್ಷರಿಮಠ, ಗಿರೀಶ ಮಡ್ಡಿಮನಿ, ಪ್ರೇಮನಾಥ ಜವಳಿ, ಶಿವಪ್ಪ ತಿರಕಣ್ಣವರ, ನಾಗಪ್ಪ ಅಂಗಡಿ ಇದ್ದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವರದಿ: ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದಲ್ಲಿ ಗುರುವಾರ ಕಸನಕದಾಸ ಜಯಂತಿ ಆಚರಿಸಲಾಯಿತು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಹನುಮಂತಪ್ಪ ಸಂಜೀವಣ್ಣವರ, ಪ್ರಾಧ್ಯಾಪಕರಾದ ಡಾ.ಕನಕಪ್ಪ ಪೂಜಾರ, ಡಾ.ಕವಿತಾ ಕುಸುಗಲ್, ಡಾ.ರಮೇಶ ಎಂ.ಎನ್ ಹಾಗೂ ಡಾ.ಸದಾಶಿವ ಮುಗಳಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.