ಸೇವೆ ಮಾಡುವವರ ಸಮಾಜ ಆಸ್ತಿ

2kpp1
Published on

ಕೊಪ್ಪ: ನಾವು ನಿತ್ಯ ಮಾಡುವ ಕರ್ತವ್ಯದಲ್ಲಿ ಶ್ರದ್ಧೆ , ಪ್ರಮಾಣಿಕತೆ, ಸೇವಾ ಮನೋಭಾವ ಇದ್ದರೆ ಸಮಾಜದಲ್ಲಿ ಅವರು ಮನ್ನಣೆಗೆ ಪಾತ್ರರಾಗುತ್ತಾರೆ ಎಂದು ರೋಟರಿ ಗವರ್ನರ್ ಸಿಎ ದೇವಾನಂದ್ ಹೇಳಿದರು.

ಹರಿಹರಪುರ ರೋಟರಿ ಕ್ಲಬ್ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಮಾತನಾಡಿ, ಇಂದು ಸೇವೆ ಮಾಡುವ ಮನಸ್ಥಿತಿಗಳು ಕಮ್ಮಿಯಾಗಿದೆ. ಮೊದಲು ಸ್ವಂತಕ್ಕೆ ನಂತರ ಸಮಾಜಕ್ಕೆ ಎಂದು ಜೀವಿಸುತ್ತಿದ್ದಾರೆ. ಅದರಲ್ಲಿ ಹೆಚ್ಚಿನ ಜನರು ಸಮಾಜದ ಏಳಿಗೆಗೆ ತಮ್ಮದೇ ಹಂತದಲ್ಲಿ ಸೇವೆ ನೀಡುತ್ತಿರುವು ಶ್ಲಾಘನೀಯ.

ಸಮಾಜದ ಜತೆ ಬೆರೆತು ಸೇವೆ ಸಲ್ಲಿಸುವ ವ್ಯಕ್ತಿಗಳನ್ನು ಗುರುತಿಸಿ, ಸಮಾಜದ ಮುಖ್ಯವಾಹಿನಿ ತರುವ ಕೆಲಸವಾಗಬೇಕಿದೆ. ಸೇವೆ ಮಾಡುವವರ ಸಮಾಜ ಆಸ್ತಿ ಎಂದರು. ಕೃಷಿ ಕಾರ್ಮಿಕರಾದ ರಾಮ ಸೇರೇಗಾರ, ನಾರಾಯಣ ಸೇರೇಗಾರರನ್ನ ಗೌರವಿಸಲಾಯಿತು. ಹಿಂದು ರುದ್ರಭೂಮಿಗೆ ಮುಕ್ತಿ ವಾಹನ ನೀಡಿದ ಹರಿಹರಪುರದ ಮಹೇಶ್ ಶೆಟ್ಟಿ ಸಹೋದರರನ್ನು ಗೌರವಿಸಲಾಯಿತು.

ಹರಿಹರಪುರ ರೋಟರಿ ಸಮುದಾಯದಳದ ಅಧ್ಯಕ್ಷ ಶ್ರೀನಿವಾಸ ಮೂರ್ತಿ, ನಾಗರಾಜ ಆಚಾರ್ ಮತ್ತು ಹರಿಹರಪುರ ಸತ್ಯ ಹರಿಹರಪುರ ಆರ್‌ಸಿಸಿ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು. ಅಗಲಿ ನಾಗೇಶ್‌ರಾವ್, ಕಾರ್ಯದರ್ಶಿ ಸತ್ಯನಾರಾಯಣ, ರೋಟರಿ ಸಹಾಯಕ ಗವರ್ನರ್ ಎಚ್.ಎಸ್ ನಟೇಶ್, ಜಿಲ್ಲಾ ಆರ್‌ಸಿಸಿ ಉಪ ಸಭಾಪತಿ ಜೆ.ಎಮ್ ಶ್ರೀಹರ್ಷ, ಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷ ದಿನೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net