ಆರೋಗ್ಯಕರ ಜೀವನದಿಂದ ಸಾಮಾಜಿಕ ಪ್ರಗತಿ

ಹನುಮಸಾಗರದ ಶಾದಿಮಹಲ್ನಲ್ಲಿ ಮುಸ್ಲಿಂ ಯಥ್ಸ್ ಕಮಿಟಿಯಿಂದ ವ್ಯಸನ ಮುಕ್ತಿ ಜಾಗೃತಿ ಫೋಸ್ಟರ್ ಬಿಡುಗಡೆ ಮಾಡಲಾಯಿತು. ಪಿಎಸ್‌ಐ ಧನುಂಜಯ ಹಿರೇಮಠ, ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ವೈದ್ಯಾಧಿಕಾರಿ ಡಾ.ದೀಪಿಕಾ ರಾಮಾನುಜಂ, ಪಿಡಿಒ ನಿಂಗಪ್ಪ ಮೂಲಿಮನಿ ಇತರರಿದ್ದರು.
ಹನುಮಸಾಗರದ ಶಾದಿಮಹಲ್ನಲ್ಲಿ ಮುಸ್ಲಿಂ ಯಥ್ಸ್ ಕಮಿಟಿಯಿಂದ ವ್ಯಸನ ಮುಕ್ತಿ ಜಾಗೃತಿ ಫೋಸ್ಟರ್ ಬಿಡುಗಡೆ ಮಾಡಲಾಯಿತು. ಪಿಎಸ್‌ಐ ಧನುಂಜಯ ಹಿರೇಮಠ, ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ವೈದ್ಯಾಧಿಕಾರಿ ಡಾ.ದೀಪಿಕಾ ರಾಮಾನುಜಂ, ಪಿಡಿಒ ನಿಂಗಪ್ಪ ಮೂಲಿಮನಿ ಇತರರಿದ್ದರು.
Published on

ಹನುಮಸಾಗರ: ಯುವ ಸಮುದಾಯ ದುಶ್ಚಟಗಳಿಗೆ ದಾಸರಾಗಿ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಪಿಎಸ್‌ಐ ಧನುಂಜಯ ಹಿರೇಮಠ ಹೇಳಿದರು.

ಪಟ್ಟಣದ ಶಾದಿಮಹಲ್ನಲ್ಲಿ ಮುಸ್ಲಿಂ ಯುಥ್ಸ್ ಕಮಿಟಿಯಿಂದ ಬುಧವಾರ ಹಮ್ಮಿಕೊಂಡಿದ್ದ ವ್ಯಸನ ಮುಕ್ತಿ ಜಾಗೃತಿ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ಯುವಕರು ನಾಳಿನ ಪ್ರಜೆಗಳು. ದುಶ್ಚಟಗಳಿಗೆ ದಾಸರಾಗದೆ ಆರೋಗ್ಯಕರ ಜೀವನ ನಡೆಸಿದಾಗ ಮಾತ್ರ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿ ಸಾಧ್ಯ. ಆತ್ಮ ಸಾಕ್ಷಿಯಿಂದ ಚಟಗಳನ್ನು ಬಿಡಬೇಕು. ದುಶ್ಚಟಗಳಿಂದ ಆಗುವ ದುಷ್ಪರಿಣಾಮಗಳನ್ನು ತಿಳಿಯಬೇಕು ಎಂದರು.

ಪ್ರವಚನಕಾರ ಲಾಲಹುಸೇನ ಕಂದಗಲ್ಲ ಮಾತನಾಡಿ, ವ್ಯಸನಗಳಲ್ಲಿ ಮದ್ಯಪಾನ ಅಪಾಯಕಾರಿದ್ದು, ನಮ್ಮ ಸಂಸ್ಕೃತಿಗೆ ವಿರೋಧವಾಗಿದೆ. ಜಾತಿವಾದಕ್ಕಿಂತ ದೊಡ್ಡ ವ್ಯಸನ ಮತ್ತೊಂದಿಲ್ಲ. ದೇಹ-ಮನಸ್ಸು ಪರಿಶುದ್ಧವಾಗಿರಲು ಉತ್ತಮ ಆಹಾರ ಸೇವಿಸಬೇಕು. ಮೊಬೈಲ್ ನೋಡುವುದು ಸಹ ವ್ಯಸನವಾಗಿದ್ದು, ಒಳ್ಳೆಯ ಕಾರ್ಯಗಳಿಗೆ ಮಾತ್ರ ಬಳಸಬೇಕು ಎಂದರು.

ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೀಪಿಕಾ ರಾಮಾನುಜಂ, ಪಿಡಿಒ ನಿಂಗಪ್ಪ ಮೂಲಿಮನಿ, ಗುತ್ತೆದಾರ ಆಸೀಫ್ ಡಾಲಾಯತ್, ಪ್ರಮುಖರಾದ ಮೈನುದ್ದೀನ್‌ಸಾಬ್ ಖಾಜಿ, ಸಿಂಕದರ ಹೊಸಮನಿ, ಸಾಜ್ಬನಸಾಬ್, ಅಬ್ದುಲ್ ರಜಾಕ ಟೇಲರ್ , ರೌಫ್ ಚೌಧರಿ, ಕಲಿಲ ಅಹ್ಮದ್ ಚೌಧರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net