ಅಸ್ತಿತ್ವ -ಅಧಿಕಾರಕ್ಕಾಗಿ ಸಮಾಜ ಸಂಘಟನೆ ಅಗತ್ಯ

Social organization is necessary for existence and power.
ಬಾದಾಮಿ ತಾಲೂಕಾ ಬಣಜಿಗ ಸಮಾಜದ ಸಮಾವೇಶ ಎಸ್.ವಿ.ಪಿ.ಸಂಸ್ಥೆಯ ಚೆರ್ಮೇನ್ ಎ.ಸಿ.ಪಟ್ಟಣದ ಉದ್ಘಾಟಿಸಿದರು. ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಬಾದಾಮಿ ತಾಲೂಕಾ ಬಣಜಿಗ ಸಮಾಜದ ಅಧ್ಯಕ್ಷ ಡಾ. ಅವಿನಾಶ ಜೆ. ಮಮದಾಪೂರ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪುರ, ಜಯದೇವ ಎಸ್. ಮಮದಾಪೂರ, ಸಿದ್ದಣ್ಣ ಆರ್. ಟೆಂಗಿನಕಾಯಿ, ಚನಮಲ್ಲಪ್ಪ ಎಂ. ಘಟ್ಟದ ಇದ್ದರು.
Published on

ಬಾದಾಮಿ: ಭವಿಷ್ಯದಲ್ಲಿ ಅಸ್ತಿತ್ವ ಹಾಗೂ ಅಧಿಕಾರಕ್ಕಾಗಿ ಎಲ್ಲರೂ ಬಣಜಿಗ ಸಮಾಜದ ಸಂಘಟನೆ ಮಾಡುವ ಅಗತ್ಯವಿದೆ ಎಂದು ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಹೇಳಿದರು.

ನಗರದ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಬಸವ ಭವನದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ (ರಿ)ದ ತಾಲೂಕಾ ಘಟಕದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಬಣಜಿಗ ಸಮಾಜದ ತಾಲೂಕಾ ಬೃಹತ್ ಸಮಾವೇಶ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜ ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಬಣಜಿಗ ಸಮಾಜ ಬಾಂಧವರು ಮೂಲಕ ಉದ್ಯೋಗದ ಜೊತೆಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಐಎಎಸ್, ಐಪಿಎಸ್, ಕೆಎಎಸ್ ಹುದ್ದೆಗೆ ಪ್ರಯತ್ನ ಮಾಡಬೇಕು. ಮುಂಬರುವ ಜಿ.ಪಂ, ತಾ.ಪಂ. ಚುನಾವಣೆಯಲ್ಲಿ ಸಮಾಜ ಬಾಂಧವರು ಸ್ಪರ್ಧೆ ಮಾಡಿ ಅಧಿಕಾರ ಪಡೆಯಬೇಕು ಎಂದು ಸಲಹೆ ನೀಡಿದರು.

ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಚೆರ್ಮೇನ್ ಎ.ಸಿ.ಪಟ್ಟಣದ ಮಾತನಾಡಿ, ಇಂದು ಜಾತಿಗೊಂದು ಸಂಘಟನೆ ನಡೆಯುತ್ತಿದೆ. ಇದು ಬಹಳ ಬೇಸರ ತಂದಿದೆ. ಇಂದು ಹಿರಿಯ ಮಾರ್ಗದರ್ಶನದಂತೆ ಎಲ್ಲರೂ ಸಂಘಟಿತರಾಗಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪುರ ಮಾತನಾಡಿ, ಲಿಂಗಾಯತ ಸಮಾಜದಲ್ಲಿಯೇ ಬಣಜಿಗ ಶ್ರೇಷ್ಠವಾಗಿದ್ದು, ಎಲ್ಲರೂ ಸಂಸ್ಕಾರದ ಜೀವನ, ಸೌಹಾರ್ಧತೆ, ಅನ್ಯವರ್ಗದವರೊಡನೆ ಉತ್ತಮ ಸಂಬಂಧದೊಂದಿಗೆ ಎಲ್ಲರೂ ಸಂಘಟಿತರಾಗಬೇಕಿದೆ. ವೀರಶೈವ ಲಿಂಗಾಯತ ಸಮಾಜ ರಾಜ್ಯ, ದೇಶ ಆಳುವ ಯೋಗ್ಯತೆ ಇದೆ. ಆದರೆ ಒಗ್ಗಟ್ಟಿನ ಕೊರತೆ ಇದೆ ಎಂದು ತಿಳಿಸಿದರು.

ಬಾದಾಮಿ ತಾಲೂಕಾ ಬಣಜಿಗ ಸಮಾಜದ ಅಧ್ಯಕ್ಷ ಡಾ. ಅವಿನಾಶ ಜೆ. ಮಮದಾಪೂರ ಮಾತನಾಡಿ, ಬಣಜಿಗ ಸಮಾಜಕ್ಕೆ ಶಿಕ್ಷಣಕ್ಕಾಗಿ 2ಎ ಹಾಗೂ ನೌಕರಿಗಾಗಿ 3ಎ ಮೀಸಲಾತಿ ಇತ್ತು. ಎಪ್ರಿಲ್ 2025 ರಲ್ಲಿ ಶಿಕ್ಷಣಕ್ಕಾಗಿ 2ಎ ಮೀಸಲಾತಿ ಅಮಾನ್ಯ ಮಾಡಿದೆ. ಇದಕ್ಕಾಗಿ ಎಲ್ಲರೂ ಅಸ್ತಿತ್ವ ಹಾಗೂ ಮುಂದಿನ ಅಧಿಕಾರಕ್ಕಾಗಿ ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ ಎಂದರು ಹೇಳಿದರು.

ಶ್ರೀರಾಮಾರೂಢ ಮಠ, ಶಿರೋಳ ಇವರು ಸಾನಿಧ್ಯ ವಹಿಸಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕ ಜಯದೇವ ಎಸ್. ಮಮದಾಪೂರ, ಬಾದಾಮಿ ತಾಲೂಕಾ ಬಣಜಿಗ ಸಮಾಜದ ಗೌರವಾಧ್ಯಕ್ಷ ಸಿದ್ದಣ್ಣ ಆರ್. ಟೆಂಗಿನಕಾಯಿ, ಕೆರೂರ ಘಟಕದ ಬಣಜಿಗ ಸಮಾಜದ ಅಧ್ಯಕ್ಷ ಚನಮಲ್ಲಪ್ಪ ಎಂ. ಘಟ್ಟದ ಇದ್ದರು. ರಾಚಣ್ಣ ಪಟ್ಟಣದ ಸ್ವಾಗತಿಸಿದರು. ಬಿ.ಸಿ.ಪ್ಯಾಟಿ, ಎಸ್.ಕೆ.ಜವಳಗದ್ದಿ ನಿರೂಪಿಸಿದರು. ವಿ.ಎಸ್.ಶೆಟ್ಟರ ವಂದಿಸಿದರು.

ಲಿಂಗಾಯತ ಸಮಾಜದಲ್ಲಿ 108 ಉಪಪಂಗಡಗಳಿವೆ. ಅಸ್ತಿತ್ವ ಹಾಗೂ ಅಧಿಕಾರಕ್ಕಾಗಿ ಸಮಾಜ ಸಂಘಟನೆ ಮಾಡುವ ಅಗತ್ಯವಿದೆ. ಮೊದಲು ಶಿಕ್ಷಣದಲ್ಲಿ 2ಎ ಮತ್ತು ಸೌಲಭ್ಯಕ್ಕೆ 3ಎ ಮೀಸಲಾತಿ ಇತ್ತು. ಬಣಜಿಗ ಸಮಾಜದವರಿಗೆ ಶಿಕ್ಷಣದಲ್ಲಿ 2ಎ ದಲ್ಲಿ ಮೀಸಲಾತಿಯನ್ನು ಈಚೆಗೆ ಹೈಕೋರ್ಟ ಅಮಾನ್ಯ ಮಾಡಿದೆ. ಇದಕ್ಕೆ ಎಲ್ಲರೂ ಹೋರಾಟ ಮಾಡಬೇಕಾಗಿದೆ. ಡಾ.ಅವಿನಾಶ ಮಮದಾಪುರ, ತಾಲೂಕಾ ಬಣಜಿಗ ಸಮಾಜದ ಅಧ್ಯಕ್ಷರು, ಬಾದಾಮಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನಗೆ ಬಿಜೆಪಿ ಟಿಕೇಟ್ ಸಿಗುತ್ತಿತ್ತು. ನಮ್ಮಲ್ಲಿಯೇ ಕೆಲವರು ನನ್ನ ಮತ್ತು ಮಹಾಂತೇಶ ಮಮದಾಪೂರ ಇಬ್ಬರು ವಿರುದ್ಧ ಎತ್ತಿಕಟ್ಟಿ ಮನಸ್ತಾಪ ಬಿಂಬಿಸಿ ರಾಜಕೀಯ ಲಾಭ ಪಡೆದು ಮೋಸ ಮಾಡಿದರು. ಸಮಯ ಬಂದಾಗ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಎಂ.ಕೆ.ಪಟ್ಟಣಶೆಟ್ಟಿ, ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net