

ಶಿವಮೊಗ್ಗ: ಸಾಮಾಜಿಕ ಜಾಲತಾಣದಲ್ಲಿ ಪಾರ್ಟ್‌ಟೈಮ್ ಕೆಲಸ ಹುಡುಕುತ್ತಿದ್ದ ನರ್ಸ್‌ಗೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಬರೋಬ್ಬರಿ 4.54 ಲಕ್ಷ ರೂ. ವಂಚಿಸಿದ್ದಾರೆ.
ಆನವಟ್ಟಿಯ ನರ್ಸಿಂಗ್ ಹೋಮ್‌ವೊಂದಲ್ಲಿ ನರ್ಸ್ ಆಗಿರುವ 26 ವರ್ಷದ ನರ್ಸ್ ಹಣ ವಂಚನೆಗೆ ಒಳಗಾದವರು. ಇವರು ಇನ್‌ಸ್ಟ್ರಾ ಗ್ರಾಂನಲ್ಲಿ ಬಂದ ಪಾರ್ಟ್ ಜೈಮ್ ಜಾಹೀರಾತನ್ನು ನಂಬಿ ಹಣ ಕಳೆದುಕೊಂಡಿದ್ದಾರೆ.
100 ರೂ.ನಿಂದ ವಿವಿಧ ಟಾಸ್ಕ್‌ಗಳನ್ನು ಆರಂಭಿಸಿದ್ದು ನ.27ರಿಂದ 30ರವರೆಗೆ ವಿವಿಧ ಟಾಸ್ಕ್‌ಗಳನ್ನು ವಿವಿಧ ಹಂತದಲ್ಲಿ ನೀಡಿದ್ದು ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ 4,54,500 ರೂ. ಹಾಕಿಸಿಕೊಂಡು ಮೋಸ ಮಾಡಿದ್ದಾರೆ. ಈ ಬಗ್ಗೆ ನರ್ಸ್ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.