

ಮರಿಯಮ್ಮನಹಳ್ಳಿ: ಬಿಜೆಪಿ ಹೈಕಾಂಡ್ ಸಾಮಾಜಿಕ ನ್ಯಾಯದಡಿ ಟಿಕೆಟ್ ಹಂಚಿದೆ ಎಂದು ಎಂದು ಸಚಿವ ಆನಂದ ಸಿಂಗ್ ಪ್ರತಿಪಾದಿಸಿದರು.
ಇದನ್ನೂ ಓದಿ: ಪುತ್ರನಿಗಾಗಿ ಸಚಿವ ಆನಂದ ಸಿಂಗ್ ಕ್ಷೇತ್ರ ತ್ಯಾಗ
ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ವಿಜಯನಗರ ಜಿಲ್ಲೆ ರಚನೆಗೆ ದೊಡ್ಡ ದೊಡ್ಡ ನಾಯಕರ ವಿರೋಧವಿತ್ತು. ಇಂಥದ್ದರಲ್ಲಿ ಜಿಲ್ಲೆ ಘೋಷಣೆ ಮಾಡಿದ್ದು ಬಿಜೆಪಿ ಪಕ್ಷದ ಸಾಧನೆಯೇ ಸರಿ. ಹಾಗಾಗಿ ಜಿಲ್ಲೆಯ ಮತದಾರರು ಬಿಜೆಪಿಯ ಋಣ ತೀರಿಸಬೇಕು.
ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ಮತದಾರರನ್ನು ಸಂಪರ್ಕ ಮಾಡುವ ಕೆಲಸ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸಬೇಕು ಎಂದರು.
ಗ್ಯಾರೆಂಟಿ ಕಾರ್ಡ್‌ಗಳನ್ನು ಕೊಡುತ್ತೇವೆ ಎಂದು ಕಾಂಗ್ರೆಸ್‌ನವರು ಜನರ ಮೂಗಿಗೆ ತುಪ್ಪ ಸವರುತ್ತಿದ್ದಾರೆ. ಆದರೆ, ಜನ ಇಂತಹ ಭರವಸೆಗಳಿಗೆ ಮರುಳಾಗುವುದಿಲ್ಲ ಎಂದರು.
ಬಿಜೆಪಿ ಅಭ್ಯರ್ಥಿ ಬಿ.ರಾಮಣ್ಣ ಮಾತನಾಡಿದರು. ಸಂಸದ ಬಿ.ದೇವೇಂದ್ರಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಜಿಲ್ಲಾ ಉಸ್ತುವಾರಿ ಪ್ರವೀಣ್‌ಜಿ, ಎಸ್.ಎಂ.ವೀರೇಶ್ವರ ಸ್ವಾಮಿ, ಎಸ್.ಕೃಷ್ಣನಾಯ್ಕ, ನಂಜನಗೌಡ್ರು, ಕೆ.ಎಂ. ತಿಪ್ಪೆಸ್ವಾಮಿ, ಸಿ.ಶೇಖರ್, ಡಿ.ರಾಘವೇಂದ್ರಶೆಟ್ಟಿ, ಗಂಡಿ ಬಸಣ್ಣ, ಗುಂಡಾ ಕೃಷ್ಣ, ಮುಟುಗನಹಳ್ಳಿ ಕೊಟ್ರೇಶ, ಎಂ.ಬದ್ರಿನಾಥ, ನಾಯ್ಕ, ರಾಜೇಶ ಸಭಾವತ್, ಎಚ್.ರವಿ ಕಿರಣ, ಬ್ಯಲಕುಂದಿ ಶ್ರೀನಿವಾಸ ಇತರರಿದ್ದರು.