ಒಳಮೀಸಲಾತಿ ಹಂಚಿಕೆಯಿಂದ ಸಾಮಾಜಿಕ ನ್ಯಾಯ

Social justice through internal reservation allocation
Published on

ವಿಜಯಪುರ:ಸಾಮಾಜಿಕ ನ್ಯಾಯದ ಆಧಾರದ ಮೇಲೆ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಳ ಮೀಸಲಾತಿ ಹಂಚಿಕೆ ಮಾಡಿರುವುದರ ಕುರಿತು ದಲಿತ ಸಂರ್ಷ ಸಮಿತಿ ಸ್ವಾಗತಿಸುತ್ತದೆ ಎಂದು ವೈ.ಸಿ. ಮಯೂರ ಹೇಳಿದರು.ದಲಿತ ಸಮುದಾಯ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಶತಮಾನಗಳಿಂದಲೂ ಹಿಂದುಳಿದಿದೆ. ಡಾ. ಬಾಬಾ ಸಾಹೇಬ್​ ಅಂಬೇಡ್ಕರ್​ ದಲಿತ, ಹಿಂದುಳಿದ ಹಾಗೂ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಕಲ್ಪಿಸುವ ಉದ್ದೇಶದಿಂದಲೇ ಸಂವಿಧಾನದಲ್ಲಿ ಮಿಸಲಾತಿ ಅಳವಡಿಸಿದ್ದರು.

ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಳ ಮೀಸಲಾತಿಯಲ್ಲಿ ಯಾವುದೇ ಸಮುದಾಯಗಳಿಗೆ ಅನ್ಯಾಯವಾಗದಂತೆ ಶೇ. 17 ರಷ್ಟಿರುವ ಎಸ್​ಸಿ ಮಿಸಲಾತಿಯನ್ನು ಎಡಗೈ (ಮಾದಿಗ) ಜನಾಂಗ ಮತ್ತು ಬಲಗೈ (ಹೊಲೆಯ/ ಛಲವಾದಿ) ಜನಾಂಗಕ್ಕೆ ತಲಾ ಶೇ. 6 ಹಾಗೂ ಸ್ಪಶ್ಯ ಜಾತಿಗಳಿಗೆ ಶೇ.5 ರಷ್ಟು ಮಿಸಲಾತಿ ಹಂಚಿಕೆ ಮಾಡುವ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿದಿದ್ದು, ಹೀಗಾಗಿ ನಮ್ಮ ಸಂಟನೆ ವತಿಯಿಂದ ಸಿಎಂ ಸಿದ್ದರಾಮಯ್ಯ ಹಾಗೂ ಮಂತ್ರಿ ಮಂಡಲದ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಶನಿವಾರ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಈ ಹಿಂದೆ ಸರ್ಕಾರ ನೇಮಕ ಮಾಡಿದ್ದ ಎಚ್​.ಎನ್​. ನಾಗಮೋಹನದಾಸ್​ ಆಯೋಗದ ವರದಿ ಸೇರಿದಂತೆ ಇತರೆ ಆಯೋಗದ ವರದಿಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದವು. ಆದರೆ ಸರ್ಕಾರ ಆ ಎಲ್ಲ ವ್ಯತ್ಯಾಸಗಳಿಗೆ ಹಾಗೂ ಒಳಮಿಸಲಾತಿಗೆ ನ್ಯಾಯಯುತ ಪರಿಹಾರ ಕಂಡುಕೊಂಡಿದೆ. ಒಂದು ವೇಳೆ ಯಾವುದೇ ಸಮುದಾಯಗಳಿಗೆ ಅಸಮಾಧಾನಗಳಿದ್ದರೆ, ಮುಂದಿನ ಜನಗಣತಿಯಲ್ಲಿ ಅದನ್ನು ಸರಿಪಡಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ. ದಲಿತ ಸಂರ್ಷ ಸಮಿತಿ ಮುಖ್ಯಮಂತ್ರಿಗಳ ಹೇಳಿಕೆಗೆ ಸಹಮತ ವ್ಯಕ್ತಪಡಿಸುವುದರ ಜತೆಗೆ ಅವಶ್ಯಕತೆ ಬಿದ್ದರೆ ಅನ್ಯಾಯವಾಗಿರುವ ಸಮುದಾಯ/ ಜಾತಿಯ ಪರವಾಗಿ ಸಮಿತಿ ಧ್ವನಿ ಎತ್ತಲಿದೆ ಎಂದು ಅವರು ಮಾಹಿತಿ ನೀಡಿದರು.

ಡಿಎಸ್​ಎಸ್​ ಸಂಟನೆ ಯಾವುದೇ ಒಂದು ಜಾತಿಗೆ, ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲ ಅಲೆಮಾರಿ ಜನಾಂಗದ ಪರವಾಗಿ ಕೆಲಸ ಮಾಡುತ್ತದೆ. ಸಮಾಜದಲ್ಲಿ ಅತ್ಯಂತ ಹಿಂದುಳಿದ ಬಡ ಬ್ರಾಹ್ಮಣರ ಪರವಾಗಿಯೂ ನ್ಯಾಯಕ್ಕಾಗಿ ಹೋರಾಟ ಮಾಡುತ್ತದೆ. ಇದು ಎಲ್ಲ ಸಮುದಾಯದ ಸಂಟನೆ ಎಂದು ಸ್ಪಷ್ಟಪಡಿಸಿದರು.

ಡಿಎಸ್​ಎಸ್​ ಜಿಲ್ಲಾ ಸಂಚಾಲಕ ಸಿದ್ಧು ರಾಯಣ್ಣವರ, ರಮೇಶ ಧರಣಾಕರ, ಶರಣು ಚಲವಾದಿ, ರಮೇಶ ನಿಂಬಾಳ, ವಿಜಯಕುಮಾರ ಕಾಂಬಳೆ, ಸದಾಶಿವ, ಪರಮೇಶ್ವರ ಸುದ್ದಿಗೋಷ್ಟಿಯಲ್ಲಿದ್ದರು.

ವಿಜಯಪುರದ ಖಾಸಗಿ ಹೋಟೆಲ್​ನಲ್ಲಿ ದಲಿತ ಸಂರ್ಷ ಸಮಿತಿಯ ಪದಾಧಿಕಾರಿಗಳು ಸುದ್ದಿಗೋಷ್ಟಿ ನಡೆಸಿದರು. ವೈ.ಸಿ. ಮಯೂರ, ಸಿದ್ದುರಾಯಣ್ಣನವರ, ರಮೇಶ ಧರಣಾಕರ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net