ಸಾಮಾಜಿಕ ಅಂತರ ಕಾಯ್ದುಕೊಳ್ಳಿ

23nsg1-Web
ನೇಸರಗಿ ಸಮೀಪ ಮಲ್ಲಾಪುರ ಕೆ.ಎನ್.ಗ್ರಾಪಂನಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಪಿಡಿಒ ಬಸನಗೌಡ ಪಾಟೀಲ ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಕ್ರೀನಿಂಗ್ ಮಷಿನ್ ವಿತರಿಸಿದರು.
Published on

ನೇಸರಗಿ: ಕೊರೊನಾ ವೈರಸ್ ಹೆಚ್ಚುತ್ತಿದ್ದು, ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡರೆ ಮಾತ್ರ ಇದನ್ನು ತಡೆಗಟ್ಟಬಹುದು ಎಂದು ಪಿಡಿಒ ಬಸನಗೌಡ ಪಾಟೀಲ ತಿಳಿಸಿದರು.

ಸಮೀಪದ ಮಲ್ಲಾಪುರ ಕೆ.ಎನ್. ಗ್ರಾಪಂನಲ್ಲಿ ಇತ್ತೀಚೆಗೆ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಸ್ಕ್ರೀನಿಂಗ್ ಮಷಿನ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ವಣ್ಣೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜಗದೀಶ ಹಲಸಗಿ ಮಾತನಾಡಿದರು. ರಾಜು ಬುಗಡಿ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಬುಗಡಿಕಟ್ಟಿ, ಶಿಕ್ಷಕರಾದ ಜಿ.ಎಸ್. ಖನಗೌಡರ, ಬಿ.ಬಿ. ಸರಾಯದ ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net