ಸೆ.22 ರಿಂದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ

sameekshe
Published on

ಕಾರವಾರ:ರಾಜ್ಯ ಸರ್ಕಾರದ ಮಹತ್ತರ ಯೋಜನೆಯಾದ ರಾಜ್ಯ ಹಿಂದುಳಿದ ಆಯೊಗವು ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2025 ನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಮಾಸ್ಟರ್ ಟ್ರೇನರ್‌ಗಳು ಹಾಗೂ ಗಣತಿದಾರರು ಜಾವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ, ಯಶಸ್ವಿಗೊಳಿಸಬೇಕೆಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಹೇಳಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಉತ್ತರ ಕನ್ನಡ ಇವರ ಸಂಯುಕ್ತ ಆಶ್ರಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ರ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೇನರಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಮಧು ಸೂಧನ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಅಡಿಯಲ್ಲಿ ರಾಜ್ಯ ಸರ್ಕಾರ ಆದೇಶದಂತೆ ಸೆ.22 ರಿಂದ ಆ.27 ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2025 ಯನ್ನು ಮನೆ ಮನೆ ಸಮೀಕ್ಷೆ ನಡೆಸಲಾಗುತ್ತಿಸದ್ದು , ಇಂದು ಜಿಲ್ಲಾ ಮಟ್ಟದ ಮಾಸ್ಟರ್ ಟ್ರೇನರ್‌ಗಳಿಗೆ ತರಬೇತಿ ನೀಡಲಾಗಿದ್ದು, ಕೈಪಿಡಿ ಮತ್ತು ಆ್ಯಪ್ ನೀಡಲಾಗುತ್ತದೆ. ತಾವುಗಳು ತಾಲೂಕು ಮಟ್ಟದಲ್ಲಿ ಗಣತಿದಾರರಿಗೆ ಶಾಲಾ ಅವಧಿ ಹೊರತು ಪಡಿಸಿ ರಜಾ ಅವಧಿಯಲ್ಲಿ ಪ್ರತಿ 50 ಗಣತಿದಾರರಿಗೆ ಒಂದು ಗುಂಪನ್ನು ಮಾಡಿ ತರಬೇತಿ ನೀಡಿ ಸಮೀಕ್ಷೆ ಯಶಸ್ವಿಗೋಳಿಸುವುದು ತಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಈಗಾಗಲೇ ಹೆಸ್ಕಾಂ ಇಲಾಖೆಯವರು ವಿದ್ಯುತ್ ಮೀಟರ್‌ಗಳಿಗೆ ರೀಡರ್‌ಗಳ ಮೂಲಕ ಜೀಯೋ ಟ್ಯಾಗ್ ಅಳವಡಿಸಿ ಮನೆಗೆ ಯು.ಎಚ್ ನಂಬರ್ ಅಳವಡಿಸಲಾಗುತ್ತಿದೆ. ಪ್ರತಿ ಗಣತಿದಾರರು ಸಮಾರು 150 ಮನೆಗಳಿಗೆ ಸಮಿಕ್ಷೆ ಮಾಡಬೇಕಾಗಿದೆ. ಈ ಸಮೀಕ್ಷೆ ನಿಗಧಿತ ಅವಧಿಯೋಳಗೆ ಮುಗಿಸಲು ಈಗಾಗಲೇ ಆಶಾ ಕಾರ್ಯಕರ್ತೆಯರು ಹಾಗೂ ಎನ್.ಎಸ್.ಎಸ್ ಅವರು ಗಣತಿದಾರರು ಕೇಳುವ 60 ಪ್ರಶ್ನೇಗಳ ಪ್ರತಿ ತೆಗೆದುಕೊಂಡು ಎಲ್ಲಾ ಮನೆಗಳಿಗೆ ತೆರಳಿ ಸಮೀಕ್ಷೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಈ ಗಣತೀಯು ಇಡೀ ದೇಶದಲ್ಲಿ ಮಾದರಿ ಗಣತಿಯಾಗಲಿದ್ದು, ಸುಮಾರು ನೂರು ವರ್ಷಗಳ ಹಿಂದೆ ಜಾತಿವಾರು ಗಣತಿಗಳು ಆಗಿದ್ದು, ಆ ನಂತರ ನಿರ್ದಿಷ್ಟವಾಗಿ, ಗಮರ್ನಹವಾಗಿ ಎಲ್ಲಾ ಅಂಶಗಳನ್ನು ಒಳಗೊಂಡ ಒಂದು ಗಣತಿ ಇದಾಗಿದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ಗಣತಿಯು ನಡೆಯುತ್ತದೆ. 2011 ರ ನಂತರ ಯಾವುದೇ ಗಣತಿಯೂ ಆಗಲ್ಲಿಲ್ಲ ಆದ ಕಾರಣ ರಾಜ್ಯ ಸರ್ಕಾರಕ್ಕೆ ಯೋಜನೆಗಳನ್ನು ರೂಪಿಸಲು ಕಷ್ಟವಾಗುತ್ತಿದೆ ಎಂದರು.

ಎಲ್ಲಾ ಇಲಾಖೆಗಳಿಗೆ ಸಹಾಯವಾಗುವಂತೆ ಯೋಜನೆಗಳನ್ನು ರೂಪಿಸುವುದಕ್ಕಾಗಿ ಈ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಈ ಸಮೀಕ್ಷೆ ಯಲ್ಲಿ ಯಾವುದೇ ಹಸ್ತಕ್ಷೇಪವಿಲ್ಲದೇ, ತಿದ್ದುಪಡಿ ಇಲ್ಲದೆ ಆಪ್ಯ್ ಮೂಲಕ ಮಾತ್ರ ಒಂದೊAದು ಕುಟುಂಬದ ಸಮಗ್ರ ಮಾಹಿತಿಯನ್ನು, ದತ್ತಾಂಶಗಳನ್ನು ಗಣತಿ ಮೂಲಕ ಸಂಗ್ರಹ ಮಾಡಬಹುದು. ನೆಟ್ ವರ್ಕ ಇಲ್ಲದ ಪ್ರದೇಶದಲ್ಲಿ ವಾಸಿಸುವ ಜನರನ್ನು ಹತ್ತಿರದ ನೆಟ್ ವರ್ಕ ಇರುವಂತಹ ಸರ್ಕಾರಿ ಕಟ್ಟಡದಲ್ಲಿ ಕರೆತಂದು ಸಮೀಕ್ಷೆ ನಡೆಸಬೇಕು, ಹಾಗೂ ಚಿಕ್ಕ ಮಕ್ಕಳು ಮತ್ತು ಅಕ್ಕ ಪಕ್ಕದ ಮನೆಯವರಿಂದ ಯಾವುದೇ ರೀತಿಯ ಮಾಹಿತಿಯನ್ನು ಪಡೆಯಬಾರದು ಎಂದರು.

ಎಲ್ಲಾ ಗಣತಿದಾರರು ಜವಬ್ದಾರಿಯಿಂದ ಮನೆಗಳ ಸಮೀಕ್ಷೆಯನ್ನು ಮಾಡಬೇಕು. ಜನರಲ್ಲಿ ಈ ಗಣತಿಯ ಬಗ್ಗೆ ಅರಿವು, ಜಾಗೃತಿ ಮೂಡಿಸಬೇಕು ಹಾಗೂ ಸರ್ಕಾರದ ಸೂಚನೆಗಳನ್ನು ಪಾಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಮಾಸ್ಟರ್ ತರಬೇತುದಾರಿಂದ ಜಿಲ್ಲಾಮಟ್ಟದ ತರಬೇತುದಾರಿಗೆ ಸಮೀಕ್ಷೆ ತರಬೇತಿ ನೀಡಲಾಯಿತು. ಹಿಂದುಳಿಂದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶಿವಕ್ಕ ಮಾದರ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಗಾರದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ತರಬೇತಿದಾರರು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net